ಜಿಲ್ಲಾ ಕಾಂಗ್ರೆಸ್ ಎಲೆಕ್ಷನ್ ವಾರ್ ರೂಂ ಸಂಯೋಜಕರಾಗಿ ಡಾ.ದಿನೇಶ್ ಭೈರೇಗೌಡ ನೇಮಕ

ಹಾಸನ: ಜಿಲ್ಲಾ ಕಾಂಗ್ರೆಸ್ ಸಂವಹನ ಸಂಯೋಜಕರಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಕಾಂಗ್ರೆಸ್ ಮುಖಂಡ ಖ್ಯಾತ ಮಕ್ಕಳ ತಜ್ಞ ಡಾ.ದಿನೇಶ್ ಭೈರೇಗೌಡ ಅವರನ್ನು‌ ನೇಮಕ ಮಾಡಲಾಗಿದೆ.

ಅರಕಲಗೂಡು ವಿಧಾನಸಭಾ ಕ್ಷೇತ್ರದ ಟಿಕೆಟ್ ವಂಚಿತರಾಗಿದ್ದ ಡಾ.ದಿನೇಶ್ ಭೈರೇಗೌಡ ಅವರಿಗೆ ಹೊಸ‌ ಜವಾಬ್ದಾರಿ ಲಭಿಸಿದೆ

ಕೆಪಿಸಿಸಿ ವತಿಯಿಂದ ಲೋಕಸಭಾ ಕೋ- ಆರ್ಡಿನೇಟ‌ರ್’ಗಳನ್ನಾಗಿ ಹಾಗೂ ಕೆಪಿಸಿಸಿ ಪದಾಧಿಕಾರಿಗಳನ್ನು ಜಿಲ್ಲೆ/ವಿಧಾನಸಭೆಗಳಿಗೆ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಅವರ ಸಹಕಾರದೊಂದಿಗೆ ಚುನಾವಣಾ ಆಯೋಗ, ಮಾಧ್ಯಮ, ಪ್ರಚಾರ ವೈಖರಿ, ಸಾಮಾಜಿಕ ಜಾಲತಾಣಗಳ ವರದಿ, ಲೋಕಸಭಾ ಕ್ಷೇತ್ರದಲ್ಲಿ ನಡೆಯುವ ದಿನನಿತ್ಯದ ಇತರ ಮಾಹಿತಿಗಳ ವರದಿಯನ್ನು ಎಐಸಿಸಿ ಹಾಗೂ ಕೆಪಿಸಿಸಿಗೆ ನೀಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಅನುಮೋದನೆಯ ಮೇರೆಗೆ “ಸಂವಹನ ಸಂಯೋಜಕರನ್ನಾಗಿ” ನೇಮಿಸಲಾಗಿದೆ.

ಅವರು ತಮಗೆ ನೀಡಿದ ಜವಾಬ್ದಾರಿಯನ್ನು ವಹಿಸಿಕೊಂಡು ಲೋಕಸಭಾ ಕ್ಷೇತ್ರದಲ್ಲಿ ವಾರ್ ರೂಮ್‌ ತೆರೆದು ಕೆಪಿಸಿಸಿ ಹಾಗೂ ಎಐಸಿಸಿ ವತಿಯಿಂದ ನೀಡುವ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಈ ಮೂಲಕ ಕೋರಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಆದೇಶಪತ್ರದಲ್ಲಿ ಸೂಚಿಸಿದ್ದಾರೆ.

ಎಂ.ಎ.ಗೋಪಾಲಸ್ವಾಮಿ ಹಾಗೂ ಡಾ.ಕೃಷ್ಣಭೈರೇಗೌಡ ಅವರನ್ನು ಜಿಪಂ ಕೆಡಿಪಿ ಮಾಜಿ ಸದಸ್ಯ ಜಾರ್ಜ್ ವಿಲ್ಸನ್ ಅಭಿನಂದಿಸಿದ್ದಾರೆ.