ಜೀವನದ ಹೊಸ ಇನ್ನಿಂಗ್ಸ್ ಪ್ರಾರಂಭಿಸಿದ ತೆಂಡೂಲ್ಕರ್ ಪುತ್ರಿ… ಫೋಟೋ-ವಿಡಿಯೋ ಹಂಚಿಕೊಂಡ ಸಾರಾ..!

ಮುಂಬಯಿ ಜ.29: ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಜೀವನದ ಹೊಸ ಅಧ್ಯಾಯ ಶುರು ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಫೌಂಡೇಶನ್ ನ ನೂತನ ನಿರ್ದೇಶಕಿಯಾಗಿ ನೇಮಕಗೊಂಡಿರುವ ಸಾರಾ, ಹೊಸ ಅಲೆ ಸೃಷ್ಟಿಸಲು ಕಾತುರರಾಗಿದ್ದಾರೆ.

ನಿರ್ಗತಿಕರ ಸೇವೆಗೆಂದು ಸ್ಥಾಪನೆಗೊಂಡ ಸಚಿನ್ ತೆಂಡೂಲ್ಕರ್ ಫೌಂಡೇಶನ್ ಇದೀಗ ಅರ್ಧ ದಶಕ ಪೂರ್ಣಗೊಳಿಸಿದೆ. ಈ ಸಂದರ್ಭದಲ್ಲಿ, ಈ ಪ್ರತಿಷ್ಠಾನವು ಮುಂಬೈನ ಬಾಂಬೆ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಾರಾ ಅವರನ್ನು ಟ್ರಸ್ಟ್‌ನ ನಿರ್ದೇಶಕಿಯಾಗಿ ಘೋಷಿಸಲಾಯಿತು.

ಆ ಬಳಿಕ ಸಂತಸ ಹಂಚಿಕೊಂಡ ಸಾರಾ, ನನ್ನ ಹೆತ್ತವರು ಪ್ರಾರಂಭಿಸಿರುವ ಸಂಸ್ಥೆಯನ್ನು ಮುಂದುವರಿಸಲು ಉತ್ಸುಕನಾಗಿದ್ದೇನೆ. ಇಲ್ಲಿನ ಮಕ್ಕಳ ಭವಿಷ್ಯದ ಸಾಧ್ಯತೆಗಳ ಜಗತ್ತನ್ನು ಬೆಳಗಿಸಲಿರುವ ಈ ಪ್ರಯಾಣಕ್ಕಾಗಿ ಕೌತುಕವಿದೆ ಎಂದರು.