ಹಾಸನ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದ್ದು, ಮತ್ತೊಂದೆಡೆ ಆಲೂರು ತಾಲೂಕಿನ ಕಾಗನೂರು ಗ್ರಾಮದಲ್ಲಿ ಶ್ರೀರಾಮ ಸಂಚರಿಸಿದ್ದ ಎಂಬುದಕ್ಕೆ ಸಾಕ್ಷಿಯಾಗಿ ಬುಧವಾರ ಪಾದದ ಗುರುತುಗಳು ಗೋಚರವಾಗಿವೆ.
ಆದರ್ಶ ಪುರುಷ ಶ್ರೀರಾಮ ಆಲೂರು ತಾಲೂಕಿಗೆ ಭೇಟಿ ನೀಡಿದ್ದ ಎಂಬ ಪೂರ್ವಿಕರ ಮಾತುಗಳಿಗೆ ಈ ಕುರುಹುಗಳು ಪೂರಕವಾಗಿದ್ದು, ಸಾರ್ವಜನಿ ಕರು ತಂಡೋಪತಂಡವಾಗಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಮೆರೆಯುತ್ತಿದ್ದಾರೆ.
ಕಾಗನೂರು ಗ್ರಾಮದ ಆಂಜನೇಯ ದೇವಾಲಯದಿಂದ ಅರ್ಧ ಕಿ.ಮೀ. ದೂರದ ಹೇಮಾವತಿ ನದಿ ತೀರದಲ್ಲಿ ‘ಪಾದಾರೆಕಲ್ಲು’ ಎಂಬ ಸ್ಥಳವಿದ್ದು, ಅಲ್ಲಿ ಪಾದ ಗಳು ಗೋಚರವಾಗಿವೆ. ಈ ಸ್ಥಳದಲ್ಲಿ ಈಶ್ವರ ಲಿಂಗ ಜತೆಯಾಗಿರುವ ಎರಡು ಪಾದಗಳು, ಮಸುಕಾಗಿ ಕಾಣುವ ಮತ್ತೊಂದು ದೊಡ್ಡ ಪಾದ, ತ್ರಿಕೋನಾಕೃತಿಯ ಪಗಡೆ ಹಾಸಿನಂತಹ ಆಕೃತಿ ಒಂದೇ ಬಂಡೆಯ ಮೇಲೆ ಮೂಡಿವೆ.