ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಹದಿನೇಳು ಕೂಲಿ ಕಾರ್ಮಿಕರಿಗೆ ಸಿಡಿಲಾಘಾತ; ಓರ್ವ ಮಹಿಳೆ ಸ್ಥಿತಿ ಗಂಭೀರ

ಹಾಸನ: ಬೇಲೂರು ತಾಲ್ಲೂಕಿನ, ಕೋರ್ಲಗದ್ದೆ ಗ್ರಾಮದಲ್ಲಿ ಗದ್ದೆಯಲ್ಲಿ ಭತ್ತ ನಾಟಿ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಹದಿನೈದು ಜನರು ಗಾಯಗೊಂಡಿದ್ದ‌ ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದೆ.

ಲತಾ (35) ಎಂಬುವವರ ಸ್ಥಿತಿ ಗಂಭೀರವಾಗಿದ್ದು ರೇಣುಕಾ (49), ಸವಿತಾ (45), ಸುಮಿತ್ರ (51), ರೇಣುಕಮ್ಮಾ (55), ನೇತ್ರ (40), ನಿರ್ಮಲ (51), ವೀಣಾ (35), ಅನಿತಾ (55) ಮಂಜುಳ 45, ಪುಷ್ಪ 35 ಭಾಗ್ಯ 45, ಶಾರದಮ್ಮ 55, ಜಯಂತಿ 55 ಗಾಯತರಮ್ಮ 45, ಮಂಜುಳಮ್ಮ 60
ಸೇರಿ ಹದಿನೇಳು ಮಂದಿಗೆ ಸಿಡಿಲು ಬಡಿದಿದ್ದು ಎಲ್ಲರನ್ನೂ ಸಕಲೇಶಪುರ ತಾಲೂಕಿನ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋರ್ಲಗದ್ದೆ ಗ್ರಾಮದ ಕೆ.ಬಿ.ಚಂದ್ರು ಎಂಬುವವರಿಗೆ ಸೇರಿದ ಗದ್ದೆಯಲ್ಲಿ 25 ಮಂದಿ ನಾಟಿ ಮಾಡುತ್ತಿದ್ದರು. ಈ ವೇಳೆ ಗುಡುಗು, ಸಿಡಿಲು ಸಹಿತ ದಿಢೀರ್ ಮಳೆ ಶುರುವಾಯಿತು. ನಾಟಿಯಲ್ಲಿ ತೊಡಗಿದ್ದ ಮಹಿಳೆಯರಿಗೆ ದಿಢೀರ್ ಸಿಡಿಲು ಬಡಿಯಿತು.