ಹುಟ್ಟೂರಿನಲ್ಲಿ ಮತ ಚಲಾಯಿಸಿದ ಡಾಲಿ ಧನಂಜಯ

ಹಾಸನ: ಖ್ಯಾತ ಚಲನಚಿತ್ರ ನಾಯಕ ನಟ ಡಾಲಿ ಧನಂಜಯ ತಮ್ಮ ಹುಟ್ಟೂರು ಅರಸೀಕೆರೆ ತಾಲ್ಲೂಕಿನ, ಕಾಳೇನಹಳ್ಳಿಯಲ್ಲಿ ಮತದಾನ ಮಾಡಿದರು.

ಕುಟುಂಬ ಸಮೇತರಾಗಿ ಆಗಮಿಸಿದ ಅವರು ತಮ್ಮ ಮತದಾನದ ಹಕ್ಕು ಚಲಾಯಿದರು. ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಅವರು ನಂತರ ಗ್ರಾಮದ ನಾಮಫಲಕದ ಮುಂದೆ ನಿಂತು ಫೋಟೋಗೆ ಫೋಸ್ ನೀಡಿದರು.