ಪೆನ್ ಡ್ರೈವ್ ಹಂಚಿಕೆ ಪ್ರಕರಣದ ಆರೋಪಿ ನಲ್ಕೆ‌ ನವೀನ್ ಜತೆ ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್ ಚರ್ಚೆ ಆಡಿಯೋ ವೈರಲ್!?

ವಿಧಾನಸಭೆ ಚುನಾವಣೆಯಲ್ಲಿ ಲಿಂಗೇಶ್ ಪರ ನಲ್ಕೆ ನವೀನ್ ಓಡಾಟ| ಕಾಂಗ್ರೆಸ್ ಕಾರ್ಯಕರ್ತನ ಜತೆ ಜೆಡಿಎಸ್ ನಂಟು?

ಹಾಸನ: ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದ ಆರೋಪಿ ಹಾಗೂ ಎಸ್ಐಟಿ ವಿರುದ್ಧ ಕಿಡಿಕಾರುತ್ತಿರುವ ಬೇಲೂರು ಕ್ಷೇತ್ರದ ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಈ ಹಿಂದೆ ಪೆನ್ ಡ್ರೈವ್ ಹಂಚಿಕೆ ಪ್ರಕರಣದ ಪ್ರಮುಖ ಆರೋಪಿ ನವೀನ್ ಗೌಡ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.

ಕಾಂಗ್ರೆಸ್ ಕಾರ್ಯಕರ್ತ‌ ಎನ್ನಲಾಗುತ್ತಿರುವ ನವೀನ್‌ಗೌಡ ಜೆಡಿಎಸ್ ನಾಯಕರ ಜೊತೆ ಸಂಬಂಧ ಹೊಂದಿದ್ದ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ವೈರಲ್ ಆಗಿರುವ ಆಡಿಯೋದಲ್ಲಿ ವಿಧಾನಸಭೆ ಚುನಾವಣೆ ಬಳಿಕ ಸೋಲಿನ ಬಗ್ಗೆ ನವೀನ್‌ಗೌಡ- ಕೆ.ಎಸ್‌.ಲಿಂಗೇಶ್ ಸಂಭಾಷಣೆ ನಡೆದಿದೆ ಎನ್ನಲಾಗಿದೆ.

ಅಣ್ಣಾ ನಿಮಗಾಗಿ ಈ ಪಕ್ಷದಲ್ಲಿದ್ದೇವೆ ಅಂತ ಲಿಂಗೇಶ್‌ಗೆ ಹೇಳಿರುವ ನವೀನ್ ಗೌಡ
ಸಂಸದ ಪ್ರಜ್ವಲ್ ನಿಮ್ಮ ವಿರುದ್ಧ ಇರುವ ನಟರಾಜ್ ಎಂಬವರ ಜತೆ ಓಡಾಡ್ತಾರೆ ಎಂದು ಲಿಂಗೇಶ್‌ಗೆ ದೂರು ಹೇಳಿದ್ದಾನೆ.

ಹೌದು ನಾನು ಮತ್ತೆ ಗೆದ್ದರೆ ನಾನೇ ಇರ್ತೀನಿ ಹಾಗಾಗಿ ಸೋಲಲಿ ಎಂದು ಕೆಲವರು ಓಡಾಡಿದ್ರು. ನಾನು ಎಂಪಿಗೆ ಕೇಳಿದ್ರೂ ಕೇಳಲಿಲ್ಲ. ಅವರಿಗೆ ನಟರಾಜೇ ಬೇಕಂತೆ ಎಂದು ಮಾತನಾಡಿರುವ ಕೆ.ಎಸ್.ಲಿಂಗೇಶ್ ಅವರ ಆಡಿಯೋ ವೈರಲ್ ಆಗಿದೆ. ಇದು ಪ್ರಜ್ವಲ್ ಪ್ರಕರಣದಲ್ಲಿ ಜೆಡಿಎಸ್ ಪರ ಹೋರಾಟದ ನಾಯಕತ್ವ ವಹಿಸಿರುವ ಲಿಂಗೇಶ್ ಅವರಿಗೆ ಇರಿಸು-ಮುರುಸು ಉಂಟು ಮಾಡಿದೆ.