ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕರಿಗೆ ಸಿಎಂ ಕೃತಜ್ಞತೆ

ಹಾಸನ: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಉದ್ಘಾಟನೆಯ ಪೂಜೆ ಮತ್ತು ಹೋಮಗಳು ಚಾಮುಂಡಿಬೆಟ್ಟ ತಾಯಿ ಸನ್ನಿದಿಯ ಪ್ರಧಾನ ಅರ್ಚಕ ಡಾ.ಎನ್.ಶಶಿಶೇಖರ ದೀಕ್ಷಿತ್ ಅವರ ನೇತೃತ್ವದಲ್ಲಿ ನೆರವೇರಿತು.

ಬೈಕೆರೆ ದೊಡ್ಡನಗರದ ಪಂಪ್ ಹೌಸ್ ನಲ್ಲಿ ನವಗ್ರಹ ಹೋಮ, ಗಣಪತಿ ಹೋಮ, ಮೃತ್ಯುಂಜಯ ಹೋಮ ಹಾಗೂ ಸಪ್ತಗಂಗಾ ಪೂಜೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು.

ಬಳಿಕ ಇವರ ಮಾರ್ಗದರ್ಶನದಲ್ಲೇ ಹೆಬ್ಬಹಳ್ಳಿಯ ವಿತರಣಾ ತೊಟ್ಟಿ 4 ರಲ್ಲಿ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಿದರು.

ಗೌರಿ ಹಬ್ಬದ ಪ್ರಯುಕ್ತ ತಾಯಿ ಸನ್ನಿದಿಯಲ್ಲಿ ಪೂಜಾ ಕಾರ್ಯಗಳ ಒತ್ತಡ ಇದ್ದರೂ ಯೋಜನೆಯ ಉದ್ಘಾಟನೆಯ ಪೂಜಾ ಕಾರ್ಯಗಳನ್ನು ನೆರವೇರಿಸಲು ಒಪ್ಪಿ ಬಂದ ದೀಕ್ಷಿತರಿಗೆ ಮುಖ್ಯಮಂತ್ರಿಗಳು ಕೃತಜ್ಞತೆ ಅರ್ಪಿಸಿದರು.