ಚುನಾವಣಾ ವೀಕ್ಷಕರಾಗಿ ಚಂದ್ರಮೋಹನ್ ಠಾಕೂರ್, ದಿವ್ಯಾ ಸತ್ಯನ್ ನೇಮಕ

ಚುನಾವಣಾ ವೆಚ್ಚ ವೀಕ್ಷಕರಾಗಿ ಐ‌ಆರ್.ಎಸ್. ಅಧಿಕಾರಿ ವಿಕಾಸ್ ಸಿಂಗ್ ಭಗ್ಲಿ, ವೈಭವ್ ಅಗರ್ವಾಲ್ ನೇಮಕ

ಹಾಸನ; ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲೆಗೆ ಚುನಾವಣಾ ವೀಕ್ಷಕರಾಗಿ ಐಎಎಸ್ ಅಧಿಕಾರಿ ಚಂದ್ರಮೋಹನ್ ಠಾಕೂರ್‌ ಹಾಗೂ ಐಪಿಎಸ್ ಅಧಿಕಾರಿ ದಿವ್ಯಾ ಸತ್ಯನ್ ಅವರನ್ನು ಚುನಾವಣಾ ಆಯೋಗ ನೇಮಕ ಮಾಡಿದೆ.

ಕಡೂರು, ಅರಸೀಕೆರೆ, ಬೇಲೂರು ಹಾಗೂ ಹಾಸನ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಚಂದ್ರಮೋಹನ್ ಠಾಕೂರ್ (ಮೊಸಂ; 7795480016) ಮತ್ತು ಶ್ರವಣಬೆಳಗೊಳ, ಹೊಳೆನರಸೀಪುರ, ಅರಕಲಗೂಡು, ಸಕಲೇಶಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಚುನಾವಣಾ ವೆಚ್ಚ ವೀಕ್ಷಕರಾಗಿ ದಿವ್ಯಾ ಸತ್ಯನ್ ಕಾರ್ಯನಿರ್ವಹಿಸುವರು.
ವೀಕ್ಷಕರ ಇ-ಮೇಲ್ ವಿಳಾಸ;hassanpcgeneralobserver @gmail.com ಆಗಿರುತ್ತದೆ.

ಚುನಾವಣಾ ವೆಚ್ಚ ವೀಕ್ಷಕರಾಗಿ ಐ‌ಆರ್.ಎಸ್. ಅಧಿಕಾರಿ ವಿಕಾಸ್ ಸಿಂಗ್ ಭಗ್ಲಿ (ಮೊಸಂ8147690016) ಹಾಗೂ ವೈಭವ್ ಅಗರ್ವಾಲ್ (ಮೊಸಂ; 8861790016) ಅವರನ್ನು ನೇಮಕ ಮಾಡಲಾಗಿದೆ. ಅವರ ಇ-ಮೇಲ್ ವಿಳಾಸ; expenditureoberverhassan @gmail.com ಆಗಿದೆ.

ಹಾಸನ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ, ಚುನಾವಣಾ ವೆಚ್ಚಗಳ ಬಗ್ಗೆ ಯಾವುದಾದರೂ ದೂರುಗಳು ಇದ್ದಲ್ಲಿ. ಮೇಲ್ಕಂಡ ಚುನಾವಣಾ ವೀಕ್ಷಕರ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಐ.ಡಿ.ಗೆ ದೂರನ್ನು ಸಲ್ಲಿಸಬಹುದಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.