ಚನ್ನರಾಯಪಟ್ಟಣ: ಮಕ್ಕಳನ್ನು ಉತ್ತಮ ಸಂಸ್ಕಾರವಂತನ್ನಾಗಿ ಮಾಡುವುದೇ ಶಿಕ್ಷಣ: ವಾಸವಿ ವಿದ್ಯಾ ಶಾಲೆಯಲ್ಲಿ ಪೋಷಕರ ಸಮಾವೇಶ ಉದ್ಘಾಟಿಸಿದ ಜೆ.ಇ.ಲೋಕೇಶ್

ಚನ್ನರಾಯಪಟ್ಟಣ:ಮಕ್ಕಳನ್ನು ಉತ್ತಮ ಸಂಸ್ಕಾರವಂತನ್ನಾಗಿ ಮಾಡುವುದೇ ಶಿಕ್ಷಣ ಎಂದು ಶಿಕ್ಷಣ ಸಂಯೋಜಕ ಜೆ.ಇ.ಲೋಕೇಶ್ ಹೇಳಿದರು.

ಪಟ್ಟಣದ ವಾಸವಿ ವಿದ್ಯಾ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೋಷಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಗುರುವಿನ ಬಗ್ಗೆ ಅಚಲವಾದ ಮನಸ್ಸು ಭಕ್ತಿ ಗಮನ ಮಕ್ಕಳಿಗೆ ಇರುತ್ತದೆ. ಶಿಕ್ಷಕ ಎಂದಿಗೂ ತಪ್ಪನ್ನು ಮಕ್ಕಳಿಗೆ ಬೋಧಿಸಬಾರದು. ಪೋಷಕರು ಹಾಗೂ ಶಿಕ್ಷಕರ ಕರ್ತವ್ಯ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದಾಗಿದೆ ಎಂದು ತಿಳಿಸಿದರು.

ಉತ್ತಮ ಸಂಸ್ಕಾರ ದೊರೆಯದಿದ್ದರೆ ಮಕ್ಕಳು ವಿಕೃತ್ತಿಗೆ ಕಾರಣರಾಗುತ್ತಾರೆ. ಹುಟ್ಟು ಸಾವು ನಡುವಿನ ಬದುಕಿನ ಅವಧಿಯಲ್ಲಿ, ಮಗು ಉತ್ತಮ ಸಂಸ್ಕಾರ ಪಡೆದು ಆಸ್ತಿ ಆಗಬೇಕು, ಮಕ್ಕಳು ಆಟದಲ್ಲಿ ತೊಡಗಬೇಕು ಎಂದಿಗೂ ಸುಳ್ಳನ್ನು ಹೇಳಬಾರದು ಗುಣಾತ್ಮಕ ಶಿಕ್ಷಣ ಎಲ್ಲವನ್ನು ಮಕ್ಕಳಿಗೆ ಕಲಿಸುವಂತಹ ಆಗಬೇಕು ಎಂದು ಸಲಹೆ ನೀಡಿದರು.

ವಿದ್ಯಾಸಂಸ್ಥೆಯ ಅಧ್ಯಕ್ಷ ಸಿ.ಎಸ್.ಆದಿಶೇಷಕುಮಾರ್, ನಿವೃತ್ತ ವಿಜ್ಞಾನ ಶಿಕ್ಷಕ ಅನಂತಸ್ವಾಮಿ, ಮುಖ್ಯ ಶಿಕ್ಷಕ ರಮೇಶ್ ಗೌಡರು, ಶಿಕ್ಷಕಿ ರಂಜಿನಿ ಸುಷ್ಮಾ ರೂಪ ಮುಂತಾದವರಿದ್ದರು. ಲಕ್ಕಿ ಡಿಪ್ ಮೂಲಕ ಅತಿಥಿ ಪೋಷಕರನ್ನ ಆಯ್ಕೆ ಮಾಡಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.