ಚನ್ನರಾಯಪಟ್ಟಣ: ಪುಡಿ ರೌಡಿಗಳ ಅಟ್ಟಹಾಸ ಶೀಘ್ರ ಅಂತ್ಯ: ಡಿವೈಎಸ್ಪಿ ಕುಮಾರ್

ಚನ್ನರಾಯಪಟ್ಟಣ: ಪುಡಿ ರೌಡಿಗಳ ಅಟ್ಟಹಾಸವನ್ನು ಮಟ್ಟ ಹಾಕಲಾಗುವುದು, ಅದೇ ನಮ್ಮ ಇಲಾಖೆಯ ಮುಖ್ಯ ಉದ್ದೇಶ ಎಂದು ಡಿವೈಎಸ್ಪಿ ಎನ್.ಕುಮಾರ್ ಹೇಳಿದರು.

ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿ, ಚನ್ನರಾಯಪಟ್ಟಣ ತಾಲೂಕಿನ ಅತ್ಯಂತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ರೌಡಿಗಳ ಅಟ್ಟಹಾಸವನ್ನು ಮಟ್ಟ ಹಾಕಲಾಗುವುದು ಎಂದರು.

ರೌಡಿಶೀಟರ್ ಗಳನ್ನು ಯಾವುದೇ ಕಾರಣಕ್ಕೂ ಸಮಾಜಘಾತಕ ಕೆಲಸಗಳಲ್ಲಿ ತೊಡಗದಂತೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ತಾಲೂಕಿನಲ್ಲಿ ಇರುವ ರೌಡಿಗಳನ್ನು ಕರೆಸಿ ಎಚ್ಚರಿಕೆ ನೀಡಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕರು ಯಾವುದೇ ತರದ ಭಯಭೀತರಾಗದೆ ಪೊಲೀಸರೊಂದಿಗೆ ಸಹಕರಿಸಬೇಕು. ಅಲ್ಲದೆ ಯಾವುದೇ ಘಟನೆ ನಡೆದರೂ ನೇರ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರುವುದು ಅಗತ್ಯ ಎಂದು ಮನವಿ ಮಾಡಿದರು .

ಎಲ್ಲಾ ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಪಾಲಿಸಬೇಕು ಹಾಗೂ ಎಲ್ಲಾ ಅಂಗಡಿಯ ಮಾಲೀಕರು 10 ಗಂಟೆಯೊಳಗೆ ಅಂಗಡಿ ಮತ್ತು ಮುಗ್ಗಟ್ಟುಗಳನ್ನು ಮುಚ್ಚಬೇಕು ಎಂದು ಎಚ್ಚರಿಸಿದರು.

ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರ ಇರಬೇಕು, ಅಪ್ರಾಪ್ತ ಮಕ್ಕಳಿಗೆ ವಾಹನಗಳನ್ನು ನೀಡದಂತೆ ಪೋಷಕರಿಗೆ ತಾಕತ್ತು ಮಾಡಿದರು. ನಗರದಲ್ಲಿ ಕಳ್ಳತನ ನಡೆದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಇದಕ್ಕೆ ಸಾರ್ವಜನಿಕರು ನಮಗೆ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು.

ಎಲ್ಲಾ ಪೊಲೀಸರು ಗಸ್ತು  ಮಾಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಯಾವುದೇ ಸಂಶಯದಾತ್ಮಕ ವ್ಯಕ್ತಿಗಳು ಕಂಡರೆ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ಮಾಹಿತಿಯನ್ನು ನೀಡಬೇಕು ಎಂದರು