ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಮುಂದಿನ 5 ದಿನಗಳಲ್ಲಿ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಕೆಲವೆಡೆ ಇಂದು ಭಾರಿ ಮಳೆಯಾಗಬಹುದು.
ಪ್ರದೇಶವಾರು ಮಳೆ ಮುನ್ಸೂಚನೆ:
ದಕ್ಷಿಣ ಒಳನಾಡು: ಚದುರಿದ ಸಾಧಾರಣ ಮಳೆಯ ಜೊತೆಗೆ ಕೆಲವೆಡೆ ದಟ್ಟ ಮಂಜು ಮುಸುಕಿನ ವಾತಾವರಣ.
ಕರಾವಳಿ ಮತ್ತು ಮಲೆನಾಡು: ಸಾಧಾರಣ ಮಳೆಯ ಸಾಧ್ಯತೆ.
ಉತ್ತರ ಒಳನಾಡು: ಒಣ ಹವೆಯಿರುವ ಸಾಧ್ಯತೆ.
ವಾಯುಭಾರ ಕುಸಿತ ಎಫೆಕ್ಟ್;
ಬಂಗಾಳ ಕೊಲ್ಲಿಯ ವಾಯುಭಾರ ಕುಸಿತವು ಮಳೆ ಮತ್ತು ಮಂಜು ಮುಸುಕಿನ ಪ್ರಭಾವವನ್ನು ಹೆಚ್ಚಿಸಿದೆ.