ಹಾಸನ; ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ತಮ್ಮ ಜನ್ಮದಿನ ಆಚರಣೆಯಲ್ಲಿ ಸಂಸದ ಶ್ರೇಯಸ್ ಪಟೇಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ-ಮೊನ್ನೆ ಪೆನ್‌ಡ್ರೈವ್ ಹಂಚಿ ನಾನು ಎಂಎಲ್‌ಸಿ ಆಗಿಲ್ಲ. ನಿಮ್ಮ ತಾತನ ಥರ ಕುತಂತ್ರ ಮಾಡಿ ಎಂಎಲ್‌ಸಿ ಆಗಿದ್ದಲ್ಲ ಎಂದು ಕಿಡಿಕಾರಿದರು.
ದೇವೇಗೌಡರ, ರೇವಣ್ಣ ಅವರ ಕುಟುಂಬಗಳನ್ನು ಮುಗಿಸುತ್ತಾರಂತೆ. ನನಗೆ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿರಲಿಲ್ಲ. ಇದೇ 25 ವರ್ಷದ ಹಿಂದೆ ಇವತ್ತೇನು ಅಚಾನಕ್ಕಾಗಿ ಸಂಸದರಾಗಿದ್ದಾರೆ ಅವರ ತಾತ ನಮ್ಮ ಅಜ್ಜಿ, ತಾಯಿ ಮೇಲೆ ಆ್ಯಸಿಡ್ ಎರಚಿಸಿದನ್ನು ಯಾರೂ ಮರೆಯಬಾರದು ಎಂದರು.
ಇಲ್ಲಿರುವ ಹಿರಿಯರಿಗೆ ಮಾತ್ರ ನೆನಪಿರುತ್ತದೆ. ಇದೇ ರೀತಿ ಕುತಂತ್ರ, ಒಳಸಂಚು ಮಾಡಿ ನಮ್ಮ ತಾತನವರ ತಮ್ಮನ ಮಕ್ಕಳಿಂದಲೇ ನಮ್ಮ ಅಜ್ಜಿ, ಅಮ್ಮನ ಮೇಲೆ ಹರದನಹಳ್ಳಿಯ ಶಿವನ ದೇವಾಲಯದಂತಹ ಪವಿತ್ರವಾದ ಸ್ಥಳದಲ್ಲಿ ಆ್ಯಸಿಡ್ ಎರಚಿಸಿದರು.
ಇದೇ ರೀತಿ ಇಡೀ ಕುಟುಂಬಕ್ಕೆ ಅವತ್ತು ಸಂಕಷ್ಟ ಬಂದಿತ್ತು. ಆವತ್ತು ಕೂಡ ಇದೇ ಕಾಂಗ್ರೆಸ್ ಸರ್ಕಾರ ಇತ್ತು. ಇಂದು 135 ಸೀಟ್, ಅವತ್ತು 130 ಸೀಟ್ ಅಷ್ಟೇ ವ್ಯತ್ಯಾಸ.
ದೇವೇಗೌಡರು, ರೇವಣ್ಣ ಅವರ ಕುಟುಂಬ ಮುಗಿಸಬೇಕು ಎನ್ನುವುದೊಂದೇ ಅವರ ಉದ್ದೇಶವಾಗಿದೆ. ಇದೇ 25 ವರ್ಷಗಳ ಹಿಂದೆ ನಮ್ಮ ಕುಟುಂಬ ಸಂಕಷ್ಟದಲ್ಲಿತ್ತು, ಆದರೆ ಏನಾಯ್ತು ಸ್ವಾಮಿ? ಇದೂ ಅದೇ ರೀತಿಯ ಒಂದು ಅನುಭವ ಎಂದರು.