ಹಾಸನ: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಡಾ.ಸುಧಾಕರ ಶೆಟ್ಟಿ ವಾರ್ಷಿಕ ದತ್ತಿ ಪ್ರಶಸ್ತಿಯನ್ನು ಜನಮಿತ್ರ ಪತ್ರಿಕೆ ಪ್ರಧಾನ ಸಂಪಾದಕ ಎಚ್.ಬಿ.ಮದನಗೌಡ ಅವರಿಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಶನಿವಾರ ಕಾಸರಗೋಡು ಜಿಲ್ಲೆ ಸೀತಾಂಗೋಳಿ ಅಲಯನ್ಸ್ ಸಭಾಂಗಣದಲ್ಲಿ, ನಡೆದ ಸಮಾರಂಭದಲ್ಲಿ ಪ್ರದಾನ ಮಾಡಿದರು.

ಕಾಸರಗೋಡು ಶಾಸಕ ಅಶ್ರುಫ್, ಗಡಿನಾಡು ಘಟಕದ ಅಧ್ಯಕ್ಷ ಸೋಮಣ್ಣ ಬೇವಿನಮರದ, ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಕಾಸರಗೋಡು ಪತ್ರಕರ್ತರ ಸಂಘದ ಎ. ಆರ್. ಸುಬ್ಬಯ್ಯ ಕಟ್ಟೆ, ರವಿ ಇನ್ನಿತರರು ಇದ್ದರು.

ಹಾಸನದ ಪತ್ರಕರ್ತರಾದ ಜೆ. ಆರ್. ಕೆಂಚೇಗೌಡ, ಕೆ. ಆರ್. ಮಂಜುನಾಥ್, ರವಿ ನಾಕಲಗೊಡು, ಎಸ್. ಆರ್. ಪ್ರಸನ್ನ ಅತೀಖುರ್ ರೆಹಮಾನ್, ಜಿ. ಪ್ರಕಾಶ್, ಚಲಂ ಹಾಡ್ಲಹಳ್ಳಿ, ನಟರಾಜ್, ಕುಮಾರ್, ಎಚ್.ಎ.ನಾಗರಾಜ್ (ದಿಗ್ವಿಜಯ) ಸಮಾರಂಭದಲ್ಲಿ ಭಾಗವಹಿಸಿದ್ದರು.

ಗೌರವ ಸಮರ್ಪಣೆ: ಹಾಸನದ ಪತ್ರಕರ್ತರು ವಿಶೇಷವಾಗಿ ಮದನ್ ಗೌಡ ಅವರನ್ನು ಸಮಾರಂಭದಲ್ಲಿ ಮೈಸೂರು ಪೇಟ ತೊಡಿಸಿ ಗೌರವ ಸಲ್ಲಿಸಿದರು.