ಹಾಸನ: ಜಾನಪದ ಪ್ರದರ್ಶಕ ಕಲೆಗಳ ಕುರಿತು ದಾವಣಗೆರೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ ಕಣಸೋಗಿ ಅವರು ಮಂಡಿಸಿದ್ದ ಮಹಾಪ್ರಬಂಧಕ್ಕೆ ಮೈಸೂರಿನ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಡಿ.ಲಿಟ್ ಪದವಿ ಪ್ರದಾನ ಮಾಡಿದೆ.
“ಜಾನಪದ ಪ್ರದರ್ಶಕ ಕಲೆಗಳ ರೂಪಾಂತರದ ಮೇಲೆ ಡಿಜಿಟಲ್ ಮಾಧ್ಯಮದ ಪ್ರಭಾವ: ಬಹು ಆಯಾಮದ ವಿಶ್ಲೇಷಣೆ” ಎಂಬ ವಿಷಯದ ಕುರಿತು ಅವರು ಸಂಶೋಧನೆ ನಡೆಸಿದ್ದರು. ಸಂಗೀತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗೇಶ ಬೆಟ್ಟಕೊಪ್ಪ ಅವರು ಈ ಗೌರವವನ್ನು ಘೋಷಿಸಿ, ಡಾ. ಕಣಸೋಗಿಗೆ ಪ್ರಮಾಣಪತ್ರವನ್ನು ವಿತರಿಸಿದರು.
ಡಾ.ಶಿವಕುಮಾರ್ ಕಣಸೋಗಿ ಅವರು ಆರು ವರ್ಷಗಳ ಕಾಲ ಪ್ರಜಾವಾಣಿ ದಿನಪತ್ರಿಕೆಯ ಹಾಸನ ಜಿಲ್ಲೆಯ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು.