ಹಾಸನ ಮೂಲದ ಜನಪ್ರಿಯ ವೈದ್ಯ ಡಾ.ಎಚ್.ಹಾರೂನ್ ಗೆ ʼಜೇರಿಯಾಟ್ರಿಕ್ ಸೊಸೈಟಿ ಆಫ್ ಇಂಡಿಯಾʼದ ಪ್ರತಿಷ್ಠಿತ ಫೆಲೋಶಿಪ್

ವೈದ್ಯ ಡಾ. ಎಚ್ ಹಾರೂನ್ ಹಾಸನದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಫಿಸಿಷಿಯನ್ ಹಾಗೂ ಡಯಾಬೆಟಾಲಜಿಸ್ಟ್ ಆಗಿ ಸೇವೆ ಸಲ್ಲಿಸಿದ್ದಾರೆ. ರೋಗಿಗಳೊಂದಿಗೆ ಆತ್ಮೀಯತೆಯಿಂದ ಮಾತನಾಡುವ ಹಾಗೂ ಮಾನವೀಯ ಒಡನಾಟ ಕಾಯ್ದುಕೊಳ್ಳುವ ತಮ್ಮ ಕಾರ್ಯ ಶೈಲಿಯಿಂದ ಡಾ. ಮುನ್ನಾಭಾಯ್ MBBS ಎಂದೇ ಹಾಸನದಲ್ಲಿ ಅವರು ಖ್ಯಾತಿ ಸಂಪಾದಿಸಿದ್ದರು.

ಮಂಗಳೂರು: ಹಾಸನ ಮೂಲದ ಜನಪ್ರಿಯ ವೈದ್ಯ, ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಆಂತರಿಕ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕರಾದ ಡಾ. ಎಚ್. ಹಾರೂನ್ ಅವರಿಗೆ ಕೊಚ್ಚಿಯಲ್ಲಿ ನಡೆದ ʼಜೇರಿಯಾಟ್ರಿಕ್ ಸೊಸೈಟಿ ಆಫ್ ಇಂಡಿಯಾʼ (FGSI)ದ ವಾರ್ಷಿಕ ರಾಷ್ಟ್ರೀಯ ಸಮ್ಮೇಳನದಲ್ಲಿ ʼಜೇರಿಯಾಟ್ರಿಕ್ ಸೊಸೈಟಿ ಆಫ್ ಇಂಡಿಯಾʼದ ಪ್ರತಿಷ್ಠಿತ ಫೆಲೋಶಿಪ್ ನೀಡಿ ಗೌರವಿಸಲಾಗಿದೆ.

ಈ ಸಂದರ್ಭದಲ್ಲಿ ಸೊಸೈಟಿಯ ಮುಖ್ಯ ಪೋಷಕ ಡಾ. ವಿ.ಕೆ. ಅರೋರಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಒ.ಪಿ. ಶರ್ಮಾ ಮತ್ತು ಅಧ್ಯಕ್ಷ ಡಾ. ಸಜೇಶ್ ಅಶೋಕನ್ ಉಪಸ್ಥಿತರಿದ್ದರು.

ಏನಿದು ಜೇರಿಯಾಟ್ರಿಕ್ ಸೊಸೈಟಿ?:-ಜೇರಿಯಾಟ್ರಿಕ್ ಸೊಸೈಟಿಯು ಹಿರಿಯ ನಾಗರಿಕರ ಆರೋಗ್ಯ ಹಾಗೂ ಕಲ್ಯಾಣದ ಬಗ್ಗೆ ಗಮನಹರಿಸುತ್ತದೆ. ಇದು ವಯೋಮಾನಕ್ಕೆ ಸಂಬಂಧಿಸಿದ ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಸಮಸ್ಯೆಗಳ ನಿರ್ವಹಣೆ, ದೀರ್ಘಕಾಲದ ರೋಗ ನಿರ್ವಹಣೆ, ಗುಣಮಟ್ಟದ ಜೀವನವನ್ನು ಉತ್ತೇಜಿಸುವ ಕೆಲಸ ಮಾಡುತ್ತದೆ.

ಜೇರಿಯಾಟ್ರಿಕ್ ಸೊಸೈಟಿ ಇಂಡಿಯಾ ಏನು ಮಾಡುತ್ತದೆ?: ಜೇರಿಯಾಟ್ರಿಕ್ ಸೊಸೈಟಿ ಇಂಡಿಯಾ (GSI) ಹಿರಿಯ ನಾಗರಿಕರ ಆರೈಕೆ, ಶಿಕ್ಷಣ, ಮತ್ತು ಸಂಶೋಧನೆಗೆ ಮುಂಚೂಣಿಯಲ್ಲಿರುವ ಪ್ರಮುಖ ಸಂಸ್ಥೆಯಾಗಿದೆ. ಅದು ಅದು ಹಿರಿಯ ನಾಗರಿಕರ ಆರೋಗ್ಯ ಗುಣ ಮಟ್ಟವನ್ನು ಸುಧಾರಿಸುವಲ್ಲಿ ತರಬೇತಿ ಮತ್ತು ಸಹಕಾರವನ್ನು ಒದಗಿಸುತ್ತದೆ.