ಹಾಸನ: ಹಿಮ್ಸ್ ಪ್ರಾಂಶುಪಾಲರಾಗಿ ಡಾ.ಬಿ.ಸಿ.ರವಿಕುಮಾರ್ ಅವರ ನೇಮಕ ಆದೇಶ ಹೊರಬಿದ್ದ ನಂತರ ಅವರನ್ನು ಈಚೆಗಷ್ಟೇ ಸಂಸ್ಥೆಯ ನಿರ್ದೇಶಕ ಹುದ್ದೆ ವಹಿಸಿಕೊಂಡಿರುವ ಡಾ.ಎಸ್.ವಿ.ಸಂತೋಷ್ ಅವರ ಸ್ಥಾನಕ್ಕೆ ನೇಮಕ ಮಾಡಲಾಗಿದೆ ಎನ್ನುವ ಗೊಂದಲ ಏರ್ಪಟ್ಟಿತ್ತು.
ಇದಕ್ಕೆ ಸ್ವತಃ ಸ್ಪಷ್ಟನೆ ನೀಡಿರುವ ಡಾ.ಬಿ.ಸಿ.ರವಿಕುಮಾರ್, ಪ್ರಾಂಶುಪಾಲ ಹುದ್ದೆಯೇ ಬೇರೆ, ನಿರ್ದೇಶಕ ಹುದ್ದೆಯೇ ಬೇರೆ ಎಂದು ಸ್ಪಷ್ಟಪಡಿಸಿದ್ದಾರೆ.
ಅವರ ಸ್ಪಷ್ಟನೆ ಇಲ್ಲಿದೆ:
ಮಾನ್ಯರೆ, ಡಾ.ರವಿಕುಮಾರ್ ಆದ ನನ್ನನ್ನು ಸರ್ಕಾರವು ಪ್ರಾಂಶುಪಾಲರ ಹುದ್ದೆಗೆ ನೇಮಕಾತಿ ಮಾಡಿದ್ದು ನಾನು ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಆಭಾರಿಯಾಗಿದ್ದೇನೆ.
ಆದರೆ ಡಾ ಸಂತೋಷ್ ರವರ ಬದಲಿಗೆ ನನ್ನನ್ನು ನೇಮಿಸಿದ್ದಾರೆ ಎಂಬಂತೆ ಅರ್ಥೈಸಿಕೊಂಡು ಕೆಲವು ಮಿತ್ರರು ಕರೆ ಮಾಡಿದ್ದಾರೆ. ಪ್ರಾಂಶುಪಾಲರ ಹುದ್ದೆಯೇ ಬೇರೆ ಹಾಗೂ ನಿರ್ದೇಶಕರ ಹುದ್ದೆಯೆ ಬೇರೆ. ನಿರ್ದೇಶಕ ಹುದ್ದೆಯು ಪ್ರಾಂಶುಪಾಲರ ಹುದ್ದೆಗಿಂತ ಉನ್ನತವಾದ ಹುದ್ದೆಯಾಗಿದ್ದು ನಿರ್ದೇಶಕರಾಗಿ ಡಾ. ಸಂತೋಷ್ ರವರು ಕಾರ್ಯ ನಿರ್ವಹಿಸುತ್ತಿದ್ದು ಶೈಕ್ಷಣಿಕ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಅವರ ಜೊತೆಗೂಡಿ ಕಾರ್ಯ ನಿರ್ವಹಿಸುವ ಹೊಣೆಗಾರಿಕೆಯನ್ನು ನನಗೆ ನೀಡಲಾಗಿದೆ.
ಹಿಮ್ಸ್ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಡಾ. ಸಂತೋಷ್ ರವರಿಗೆ ಮತ್ತು ನನಗೆ ಮತ್ತು ನಮ್ಮ ಹಿಮ್ಸ್ ತಂಡಕ್ಕೆ ನಿಮ್ಮೆಲ್ಲರ ಸಹಕಾರವಿರಲಿ