ಹಿಮ್ಸ್ ಪ್ರಾಂಶುಪಾಲರಾಗಿ ಡಾ.ಬಿ.ಸಿ.ರವಿಕುಮಾರ್ ನೇಮಕ

ಈ ಹಿಂದೆ ಎರಡು ಅವಧಿಗೆ ನಿರ್ದೇಶಕರಾಗಿದ್ದ ರವಿಕುಮಾರ್ ಗೆ ಮಣೆ

ಹಾಸನ: ಹಿಮ್ಸ್ ನಿರ್ಗಮಿತ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಹಿಮ್ಸ್ ನ ಪ್ರಾಂಶುಪಾಲರಾಗಿ ನೇಮಕಗೊಂಡಿದ್ದಾರೆ.

ಡಾ.ನಾಗೇಶ್ ಅವರ ನಿವೃತ್ತಿಯಿಂದ ತೆರವಾಗಿದ್ದ ಪ್ರಾಂಶುಪಾಲ ಹುದ್ದೆ ಖಾಲಿ ಉಳಿದಿತ್ತು. ಡಿಸೆಂಬರ್ 24ರಂದು ಸಂಸ್ಥೆಯ ನಿರ್ದೇಶಕರಾಗಿ ಎರಡು ಅವಧಿಯನ್ನು ಪೂರೈಸಿದ್ದ ಡಾ.ಬಿ.ಸಿ.ರವಿಕುಮಾರ್ ಅವರನ್ನು ಚರ್ಮರೋಗ ವಿಭಾಗದ ಪ್ರಾಧ್ಯಾಪಕರಾಗಿ ಮುಂದುವರಿಯಲು ಆದೇಶಿಸಲಾಗಿತ್ತು.

ಈಗ ಸರ್ಕಾರ ತನ್ನ ಆದೇಶವನ್ನು ಮಾರ್ಪಡಿಸಿ ಅವರನ್ನು ಹಿಮ್ಸ್ ಪ್ರಾಂಶುಪಾಲರಾಗಿ ನೇಮಕ ಮಾಡಿದೆ.

ಅವರು ಎರಡು ಅವಧಿಗೆ ಹಾಸನ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಸಂಸ್ಥೆಯನ್ನು ಉತ್ತಮಗೊಳಿಸಲು ಶ್ರಮಿಸಿದ್ದನ್ನು ಸ್ಮರಿಸಬಹುದು.