ಬೆಂಗಳೂರು ಫೆ.05: ಪ್ರೊ ಕಬಡ್ಡಿ 12ನೇ ಆವೃತ್ತಿಗೆ ಬೆಂಗಳೂರು ಬುಲ್ಸ್ ಟೀಂನಲ್ಲಿ ನೀವೂ ಆಡ್ಬೇಕಾ? ನೀವೂ ಕಬ್ಬಡ್ಡಿ ಚಾಂಪಿಯನ್ ಅನ್ನಿಸ್ಕೋಬೇಕಾ..? ಹಾಗಿದ್ರೆ ಇಲ್ಲಿದೆ ಸುವರ್ಣಾವಕಾಶ. ಕರ್ನಾಟಕದ ಬಿ.ಸಿ.ರಮೇಶ್‌ರನ್ನು ಪ್ರಧಾನ ಕೋಚ್ ಆಗಿ ನೇಮಿಸಿಕೊಂಡಿರುವ ಬೆಂಗಳೂರು ಬುಲ್ಸ್, ಇದೀಗ ರಾಜ್ಯದಲ್ಲಿ ಕಬಡ್ಡಿ ಪ್ರತಿಭೆಗಳ ಹುಡುಕಾಟ ನಡೆಸಲು ನಿರ್ಧರಿಸಿದೆ.
ಫೆ.8 ಹಾಗೂ 9ರಂದು ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯ್ಕೆ ಟ್ರಯಲ್ಸ್ ನಡೆಸಲಿದೆ. ನಿಮಗೆ ಈ ಕೆಳಗಿನ ಅರ್ಹತೆಗಳಿದ್ರೆ ನೀವೂ ಸೆಲೆಕ್ಷನ್ ಅಲ್ಲಿ ಪಾಲ್ಗೊಳ್ಳಬಹುದು.
ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಆಟಗಾರರು, 17ರಿಂದ 27 ವರ್ಷ ವಯಸ್ಸಿನೊಳಗಿನವರಾಗಿರಬೇಕು. ಅಖಿಲ ಭಾರತೀಯ ಕಬಡ್ಡಿ ಫೆಡರೇಶನ್(ಎಕೆಎಫ್‌ಐ)ನಲ್ಲಿ ಹೆಸರು ನೋಂದಾಯಿಸಿಕೊಂಡಿರಬೇಕು ಅಥವಾ ಹೆಸರು ನೋಂದಣಿಗೆ ಅರ್ಜಿ ಸಲ್ಲಿಸಿರಬೇಕು. ಆಸಕ್ತರು ಮೇಲ್ಕಂಡ ದಿನಾಂಕದಂದು ಮಧ್ಯಾಹ್ನ 2 ಗಂಟೆಗೆ ಸ್ಥಳದಲ್ಲಿ ಹಾಜರಿರುವಂತೆ ಬುಲ್ಸ್ ತಂಡ ಎಕ್ಸ್ ಮೂಲಕ ಸೂಚಿಸಿದೆ.