ಶಕ್ತಿ ಯೋಜನೆ ಪರಿಣಾಮ; ಹಾಸನಾಂಬೆ ದರ್ಶನಕ್ಕೆ ೧೦ ಲಕ್ಷ ಭಕ್ತರ ನಿರೀಕ್ಷೆ!

ಹಾಸನಾಂಬೆ ಜಾತ್ರೆ: ಹೆಚ್ಚುವರಿ ಭದ್ರತೆ ಅಧಿಕ ಮಹಿಳಾ ಸಿಬ್ಬಂದಿ ನಿಯೋಜನೆಗೆ ಮೇಲಧಿಕಾರಿಗಳಲ್ಲಿ ಮನವಿ: ಎಸ್ಪಿ ಸುಜೀತಾ ಹೇಳಿಕೆ

ಹಾಸನಾಂಬ ಜಾತ್ರಾಮಹೋತ್ಸವ ಹಿನ್ನೆಲೆ ಡಿಸಿ ಕಚೇರಿ ಆವರಣದಲ್ಲಿಂದು ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ

ಹಾಸನ: ಹಾಸನಾಂಬ ಉತ್ಸವದ ಹಿನ್ನೆಲೆಯಲ್ಲಿ ಈ ಬಾರಿ ಭದ್ರತೆಗೆ ಹೆಚ್ಚಿನ ಆದÀ್ಯತೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ ತಿಳಿಸಿದರು.
ಮುಂದಿನ ತಿಂಗಳು ೨ ರಿಂದ ಆರಂಭವಾಗುವ ಹಾಸನಾಂಬ ಜಾತ್ರಾಮಹೋತ್ಸವ ಹಿನ್ನೆಲೆ ಡಿಸಿ ಕಚೇರಿ ಆವರಣದಲ್ಲಿಂದು ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಿಂದ ಹೆಚ್ಚಿನ ಸಂಖ್ಯೆಯ ಮಹಿಳಾ ಸಿಬ್ಬಂದಿ ನೇಮಕ ಮಾಡಲು ಯೋಜಿಸಲಾಗಿದೆ ಎಂದು ಹೇಳಿದರು.
ಶಕ್ತಿ ಯೋಜನೆ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ನಾಡಿನ ವಿವಿಧೆಡೆಗಳಿಂದ ಮಹಿಳೆಯರು ಆಗಮಿಸುವ ನಿರೀಕ್ಷೆ ಇರುವುದರಿಂದ ಮಹಿಳಾ ಪೊಲೀಸ್ ಸಿಬ್ಬಂದಿ ನೇಮಕ ಮಾಡಿ, ಭದ್ರತೆ ಒದಗಿಸಲಾಗುವುದು ಎಂದರು.
ಈ ಸಂಬAಧ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ದೇವಾಲಯದ ಹೆಚ್ಚು ಕಡೆಗಳಲ್ಲಿ ಮಹಿಳಾ ಸಿಬ್ಬಂದಿ ಬಳಸಿಕೊಳ್ಳಲು ಯೋಜಿಸಲಾಗಿದೆ. ಮಹಿಳಾ ಭಕ್ತರಿಗೆ ರಕ್ಷಣೆ ಜೊತೆಗೆ ಎಲ್ಲಾ ರೀತಿಯ ಸುರಕ್ಷತೆಗೂ ಒತ್ತು ನೀಡಲಾಗುವುದು ಎಂದು ತಿಳಿಸಿದರು.
೧೦ ಲಕ್ಷ ಜನ ಸೇರುವ ನಿರೀಕ್ಷೆ:
ಈ ಬಾರಿಯ ಹಾಸನಾಂಬ ಉತ್ಸವಕ್ಕೆ ೧೦ ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಉಪವಿಭಾಗಾಧಿಕಾರಿ ಮಾರುತಿ ಹೇಳಿದರು. ಪ್ರತಿ ವರ್ಷದಂತೆ ಈ ಬಾರಿಯೂ ಅದ್ಧೂರಿ ಉತ್ಸವಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಎಲ್ಲರೂ ಸಮಾಧಾನವಾಗಿ ಸಹಕಾರ ನೀಡುವಂತೆ ಮನವಿ ಮಾಡಿದರು
ಈಗಾಗಲೇ ೮ ವರ್ಷಗಳ ಬಳಿಕ ದೇವಾಲಯಕ್ಕೆ ಬಣ್ಣ ಹಚ್ಚಿ, ಲೈಟಿಂಗ್ಸ್ ವ್ಯವಸ್ಥೆ ಜೊತೆಗೆ ಭಕ್ತರ ದರ್ಶನಕ್ಕೆ ಅಗತ್ಯ ಇರುವ ಬ್ಯಾರಿಕೇಡ್ ಅಳವಡಿಸಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬರುವ ಭಕ್ತರಿಗೆ ಆಸನಗಳ ವ್ಯವಸ್ಥೆ, ಕುಡಿಯುವ ನೀರು, ಮಜ್ಜಿಗೆ, ನೆರಳು ಕಲ್ಪಿಸಲು ಕಮಾನುಗಳನ್ನ ಕಲ್ಪಿಸಿ ವಿಕಲಚೇತನರಿಗೆ ಅನುಕೂಲ ಆಗುವಂತೆ ವ್ಹೀಲ್‌ಚೇರ್ ಮೂಲಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ನಗರದ ಪ್ರಮುಖ ರಸ್ತೆಗಳಲ್ಲಿ ಆಕರ್ಷಕ ಸ್ವಾಗತ ಕಮಾನುಗಳನ್ನು ನಿರ್ಮಿಸಿ, ನಗರದ ಮಹಾರಾಜ ಪಾರ್ಕ್ ಬಳಿ ಸಾಂಸ್ಕöÈತಿಕ ಕಾರ್ಯಕ್ರಮಗಳ ಆಯೋಜನೆಗೆ ಸಿದ್ಧತೆ ಮಾಡಲಾಗಿದೆ. ಅಲ್ಲದೆ ನಗರದ ಅಲ್ಲಲ್ಲಿ ಎಲ್‌ಇಡಿ ಪರದೆಗಳ ಮೂಲಕ ದೇವರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಈ ಬಾರಿ ವಿನೂತನವಾಗಿ ದೇವರ ದರ್ಶನಕ್ಕೆ ಪಾಸ್‌ಗಳ ವಿತರಣೆ ಮಾಡಲು ಯೋಜನೆ ರೂಪಿಸಲಾಗಿದೆ ಕ್ಯು ಆರ್
ಕೋಡ್ ಮೂಲಕ ಸ್ಕಾö್ಯನ್ ಮಾಡಿ ಒಳ ಬಿಡಲು ಯೋಜನೆ ರೂಪಿಸಲಾಗಿದೆ, ದೇವಾಲಯಕ್ಕೆ ಬರುವ ಪ್ರಯಾಣಿಕರ ಅನುಕೂಲಕ್ಕೆ ಸಾರಿಗೆ ವ್ಯವಸ್ಥೆ ಹೆಚ್ಚಿಸಿ ದೂರದಿಂದ ಬರುವ ಮಹಿಳಾ ಹಾಗೂ ಪುರುಷ ಭಕ್ತರಿಗೆ ಉಳಿದುಕೊಳ್ಳಲು ಖಾಸಗಿ ಕಲ್ಯಾಣ ಮಂಟಪ ಹಾಗೂ ಇನ್ನಿತರ ಕಟ್ಟಡಗಳನ್ನು ಬಾಡಿಗೆಗೆ ಪಡೆದು ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು ಎಂದು ನುಡಿದರು.
ಶಾಸಕ ಹೆಚ್.ಪಿ.ಸ್ವರೂಪ್ ಮಾತನಾಡಿ, ಒಟ್ಟಿನಲ್ಲಿ ಉತ್ಸವದಂದು ಯಾವುದೇ ಗೊಂದಲ ಆಗದಂತೆ ಮುಂಜಾಗ್ರತಾ ಕೈಗೊಳ್ಳುವ ಮೂಲಕ ಉತ್ಸವ ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು. ಜಿಲ್ಲಾಧಿಕಾರಿ ಸತ್ಯಭಾಮ ಸಿ. ಇದ್ದರು.

ಹೇಳಿಕೆ:
ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ
ಆಚರಿಸಲಾಗುತ್ತಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಈಗಾಗಲೇ ಎಲ್ಲಾ ಸಿದ್ಧತಾ ಕಾರ್ಯ ಪೂರ್ಣಗೊಂಡಿವೆ. ನ.೨ ರಂದು ಮಧ್ಯಾಹ್ನ ೧೨ಕ್ಕೆ ಶಾಸ್ತೊçÃಕ್ತವಾಗಿ ಬಾಗಿಲು ತೆರೆಯಲಾಗುವುದು. ಈ ಸಂದರ್ಭದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಸೇರಿ ಹಲವು ಗಣ್ಯರು ಆಗಮಿಸಲಿದ್ದಾರೆ. ದರ್ಶನಕ್ಕೆ ರಾಜ್ಯದ ಹಲವು ಸಚಿವರು, ಶಾಸಕರು ಹಾಗೂ ಇನ್ನು ಹಲವು ಗಣ್ಯರು ಆಗಮಿಸಲಿದ್ದು ಯಾವುದೇ ರೀತಿಯ ಲೋಪ ಆಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬರುವ ಭಕ್ತರಿಗೆ ಶೌಚಾಲಯ, ಕುಡಿಯುವ ನೀರು ಹಾಗೂ ಇನ್ನಿತರ ಸೌಲಭ್ಯ ನೀಡಲಾಗುವುದು. ಅಲ್ಲದೆ ನಗರದ ಸ್ವಚ್ಛತೆ ಬಗ್ಗೆ ನಗರಸಭೆ ಕ್ರಮ ಕೈಗೊಳ್ಳಲಿದೆ.
-ಸ್ವರೂಪ್ ಪ್ರಕಾಶ್,ಶಾಸಕ