ಹಾಸನದಲ್ಲಿ ರೌಡಿಸಂ ಅಟ್ಟಹಾಸ ತಡೆಗೆ ಕ್ರಮ: ಎಸ್ಪಿ‌ ಮೊಹಮದ್ ಸುಜೀತಾ

ಸಂಚಾರ ಸಮಸ್ಯೆಗೆ ಶೀಘ್ರವೇ ಸರ್ಜರಿ| ಒಂದು ತಿಂಗಳಲ್ಲಿ ಟ್ರಾಫಿಕ್ ವ್ಯವಸ್ಥೆ ಸುಧಾರಣೆಗೆ ಕ್ರಮ

ಹಾಸನ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಮುಖ್ಯವಾಗಿ ರೌಡಿಸಂ ಆಟಾಟೋಪ ತಡೆಯಲು ನಿಗಾ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ ಹೇಳಿದರು.

ಲೋಕಸಭೆ ಚುನಾವಣೆ ವೇಳೆ 59 ರೌಡಿಶೀಟರ್‌ಗಳನ್ನು ಗಡಿಪಾರು ಮಾಡಲಾಗಿತ್ತು. ಕಳೆದ 8 ತಿಂಗಳಲ್ಲಿ ಐವರು ರೌಡಿಶೀಟರ್‌ಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಹಿಂದಿನ 6 ತಿಂಗಳಲ್ಲಿ 9 ರೌಡಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ. ಮುಂದಿನ ದಿನಗಳಲ್ಲೂ ರೌಡಿ ಚಟುಚಟಿಕೆಗಳು ಹೆಚ್ಚದಂತ ಕ್ರಮ ವಹಿಸಲಾಗುವುದು ಎಂದು ಎಸ್‌ಪಿ ತಿಳಿಸಿದರು.