ಅನಂತಕುಮಾರ್ ಹೆಗ್ಡೆ ಮನುಷ್ಯನೇ ಅಲ್ಲ; ಸಚಿವ ರಾಜಣ್ಣ ಕಿಡಿ

ಅವರ ತಲೆಯಲ್ಲಿ ಏನಾದರೂ ಬುದ್ದಿ ಇದೆಯಾ? ಎಂದು ಪ್ರಶ್ನಿಸಿದ ಸಚಿವ

ಹಾಸನ: ಸಂಸದ ಅನಂತಕುಮಾರ್ ಹೆಗ್ಡೆ ಮನುಷ್ಯನೇ ಅಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಗುಡುಗಿದರು.

ಸಂಸದ ಅನಂತ್ ಕುಮಾರ್ ಹೆಗ್ಡೆ ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನ ಬಳಕೆ ಮಾಡಿರುವ ಬಗ್ಗೆ ನಗರದಲ್ಲಿ ಭಾನುವಾರ ಪ್ರತಿಕ್ರಿಯಿಸಿದರು.

ಅವರು ಒಬ್ಬ ಸಚಿವರಾಗಿದ್ದವರು, ನಾವು ಸಂವಿಧಾನ ಬದಲಾಯಿಸುತ್ತೇವೆ, ಜನ ಅದಕ್ಕೇ ನಮಗೆ ಓಟು ಹಾಕಿರೋದು ಅಂತ ಹೇಳ್ತಾರಲ್ಲ ಅವರ ತಲೆಯಲ್ಲಿ ಏನಾದರೂ ಬುದ್ದಿ ಇದೆಯಾ? ಎಂದು ಪ್ರಶ್ನಿಸಿದರು.

ಸಂತಾಪ:
ರಾಜ ವೆಂಕಟ್ಟಪ್ಪ ನಾಯಕ ನನಗೆ ಬಹಳ ಅಚ್ಚುಮಚ್ಚು, ಆತ್ಮೀಯ೪ರಾಗಿದ್ದರು.
ಕಳೆದ ವಾರವಷ್ಟೇ ಅವರನ್ನು ಉಗ್ರಾಣ ನಿಗಮದ ಅಧ್ಯಕ್ಷರಾಗಿ ಸರ್ಕಾರ ನೇಮಕ ಮಾಡಿತ್ತು.ನಾನೇ ಅವರಿಗೆ ಅಧಿಕಾರವನ್ನು ಹಸ್ತಾಂತರ ಮಾಡಿಸಿದ್ದೆ. ಅವರ ನಿಧನದಿಂದ ನನಗೆ ವೈಯುಕ್ತಿಕವಾಗಿ ಬಹಳ ನಷ್ಟವಾಗಿದೆ ಎಂದರು.

ರಾಜ ವೆಂಕಟಪ್ಪ ನಾಯಕ ಎಂದು ರಾಜರ ಹೆಸರಿದ್ದರೂ ಅವರು ಬಹಳ ಸ್ನೇಹಜೀವಿ, ಸರಳತೆಗೆ ಹೆಸರಾಗಿದ್ದಂತಹ ಮನುಷ್ಯ.
ಅವರ ನಿಧನದಿಂದ ನಮಗೆಲ್ಲರಿಗೂ ಅಘಾತ ಆಗಿದೆ. ಅವರ ಕುಟುಂಬಕ್ಕೆ ಅವರ ಅಗಲಿಕೆಯನ್ನು ಸಹಿಸುವಂತಹ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದರು.