ಅರ್ಧ ಪೈಸೆ ಲಂಚದ ಆರೋಪವಿದ್ದರೂ ದೇವಸ್ಥಾನಕ್ಕೆ ಬಂದು ಆಣೆ ಮಾಡಲಿ; ಬಿ.ಶಿವರಾಮುಗೆ ಸಚಿವ ರಾಜಣ್ಣ ಸವಾಲು

ನಾಲಿಗೆ ಹೇಗೆ ಬೇಕಾದರೂ ತಿರುಗುತ್ತೆ, ಎಲುಬಿಲ್ಲದ ನಾಲಿಗೆ, ಆಚಾರವಿಲ್ಲದೆ ನಾಲಿಗೆ ನಿನ್ನ ನೀಚ ಬುದ್ದಿಯ ಬಿಡು ಅಂತಾರೆ

ಹಾಸನ: ಯಾವನ್ ಹತ್ರನಾದರೂ ಅರ್ಧಪೈಸೆ ಲಂಚ ಪಡೆದ ಬಗ್ಗೆ ನನ್ನ ಮೇಲೆ ಆರೋಪ ಇದ್ದರೆ ಬಂದು ಯಾವುದಾದರೂ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಹೇಳಿ ನಾನು ರಾಜಕೀಯನೇ ಬಿಟ್ಟು ಬಿಡ್ತಿನಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಗುಡುಗಿದರು.

ಜಿಲ್ಲೆಯಲ್ಲಿ 40% ಕಮಿಷನ್ ಪಡೆಯಲಾಗಿತ್ತಿದೆ ಎಂಬ ಮಾಜಿಸಚಿವ ಬಿ.ಶಿ.ವರಾಂ ಆರೋಪಕ್ಕೆ ಪ್ರತಿಕ್ರಿಯಿಸಿದರು.

ನಾಲಿಗೆ ಹೇಗೆ ಬೇಕಾದರೂ ತಿರುಗುತ್ತೆ, ಎಲುಬಿಲ್ಲದ ನಾಲಿಗೆ, ಆಚಾರವಿಲ್ಲದೆ ನಾಲಿಗೆ ನಿನ್ನ ನೀಚ ಬುದ್ದಿಯ ಬಿಡು ಅಂತಾರೆ.

ಪ್ರಾಮಾಣಿಕತೆಯಲ್ಲಿ ನಾನು ಯಾರಿಗೇನು ಕಡಿಮೆಯಿಲ್ಲ. ಯಾರೆಲ್ಲಾ ಆರೋಪ ಮಾಡ್ತರಲ್ಲ, ಅವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಬಿ.ಶಿವರಾಮು ಅವರನ್ನು ಕುಟುಕಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸರ್ಕಾರದ ವಿರುದ್ಧ ಆರೋಪ ‌ಸಂಬಂಧ
ಯಾರು ಹಣ ಕೇಳ್ತಿದ್ದಾರೆ ಅಂತ ದೂರು ಕೊಡಬೇಕಲ್ಲ? ಪ್ರಧಾನಮಂತ್ರಿ ಮೋದಿಯವರು ರಾತ್ರಿ ಫೋನ್ ಮಾಡಿದ್ರು, ಏನೋ ಹೇಳಿದ್ರು ಅಂತ ನಾನು ಹೇಳಲು ಆಗುತ್ತಾ? ಎಂದು ಪ್ರಶ್ನಿಸಿದರು.

ಯಾವ ಅಧಿಕಾರಿಗಳು ಕೇಳಿದ್ದಾರೆ? ಎಷ್ಟು ಕೇಳಿದ್ದಾರೆ? ಏನಾದರೂ ಹೇಳಬೇಕಲ್ಲವೇ.
ಕೆಂಪಣ್ಣನ ಬಗ್ಗೆ ಗೌರವವಿದೆ, ಸತ್ಯ ಹೇಳ್ತಾರೆ ಅಂತ ನಾನು ನಂಬುತ್ತೇನೆ. ಆದರಡ ಅವರು ನಿರ್ದಿಷ್ಟವಾಗಿ ಅವರು ಹೇಳಬೇಕು.

ಮೂರು ಲಕ್ಷಕ್ಕೂ ಅಧಿಕ ಅಧಿಕಾರಿಗಳು ಇದ್ದಾರೆ. ಯಾವ ಅಧಿಕಾರಿ ದುಡ್ಡು ಕೇಳ್ತಾರೆ, ಯಾರ ಪರವಾಗಿ ಕೇಳ್ತಾರೆ, ಯಾವ ವಿಚಾರಕ್ಕೆ ಕೇಳ್ತಾರೆ ಅಂತ ಹೇಳಿದ್ರೆ ಅವರ ಬಗ್ಗೆ ಇರುವ ಗೌರವ ಇನ್ನೂ ಹೆಚ್ಚುತ್ತೆ ಎಂದರು.

ಬಿಜೆಪಿಯವರು ಅಸ್ತ್ರವಾಗಿ ಬಳಸಿಕೊಳ್ಳಲಿ ಹೇಳಿ, ಯಾರು ಬೇಡ ಅಂತಾರೇ? ಯಾರೂ ಸನ್ಯಾಸಿಗಳಲ್ಲಾ, ಎಲ್ಲರೂ ರಾಜಕೀಯ ಮಾಡುವವರೇ, ಯಾವುದೇ ಅಂಶಗಳು ಅವರಿಗೆ ಬೆಂಬಲವಾಗಿರುತ್ತೆ ಅದನ್ನು ಬಳಸಿಕೊಂಡು ಮಾಡಲಿ ಎಂದರು.