ಕೆ.ಎಂ.ಶಿವಲಿಂಗೇಗೌಡ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾಗುವುದು ನೂರಕ್ಕೆ ನೂರು ಗ್ಯಾರೆಂಟಿ; ರಾಜಣ್ಣ

ಕೊನೆ ಕ್ಷಣದಲ್ಲಿ ಪಟ್ಟಿಯಿಂದ ಅವರ ಹೆಸರು ಹೊರಹೋಗಬೇಕಾಯಿತು. ಶಿವಲಿಂಗೇಗೌಡ ಅವರಿಗೆ ಮುಂದೆ ಭವಿಷ್ಯ ಇದೆ.

ಹಾಸನ: ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಸಚಿವರಾಗುವುದು, ಈ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗುವುದು ನೂರಕ್ಕೆ ನೂರು ಗ್ಯಾರೆಂಟಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಗೃಹಮಂಡಳಿ ನೂತನ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಚಿವ ಸ್ಥಾನದ ವಂಚಿತ ಶಾಸಕರಲ್ಲಿ ಶಿವಲಿಂಗೇಗೌಡ ಕೂಡ ಒಬ್ಬರು. ಅವರ ಹೆಸರು ಮೊದಲ ಪಟ್ಟಿಯಲ್ಲಿತ್ತು, ಅವರೂ ನಮ್ಮ ಜತೆಯೇ ಸಚಿವರಾಗಬೇಕಿತ್ತು. ಕೊನೆ ಕ್ಷಣದಲ್ಲಿ ಪಟ್ಟಿಯಿಂದ ಅವರ ಹೆಸರು ಹೊರಹೋಗಬೇಕಾಯಿತು. ಶಿವಲಿಂಗೇಗೌಡ ಅವರಿಗೆ ಮುಂದೆ ಭವಿಷ್ಯ ಇದೆ.

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಅಧಿಕಾರ ಶಿವಲಿಂಗೇಗೌಡರಿಗೆ ಸಿಗುತ್ತೆ ಅದರಲ್ಲಿ ಯಾವುದೇ ಅನುಮಾನವಿಲ್ಲ ಮುಂದೆ ಸಚಿವರು ಆಗ್ತಾರೆ, ಜಿಲ್ಲಾ ಉಸ್ತುವಾರಿ ಸಚಿವರೂ ಆಗ್ತಾರೆ ಎಂದು ಭವಿಷ್ಯ ನುಡಿದರು.