ಹಾಸನ : ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ರಾಜಣ್ಣ ಅವರಿಗೆ ಅಧಿಕಾರಿಗಳಿಂದ ಹೊಸವರ್ಷದ ಶುಭಾಶಯಗಳ ಸುರಿಮಳೆಯೇ ಆಯಿತು.
ಹೂಗುಚ್ಛ ನೀಡುವ ಮೂಲಕ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಸಿಇಓ ಹಾಗೂ ಪೊಲೀಸ್ ಅಧಿಕಾರಿಗಳು ಶುಭಾಶಯ ಕೋರಿದರು.
ಜಿಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾರ ಹಾಕಿ, ಹೂಗುಚ್ಛ ನೀಡಿ ಶುಭಾಶಯ ಕೋರಿದರು.
ಸಚಿವರಿಗೆ ಹಾರ ಹಾಕಿದ ಹೊಳೆನರಸೀಪುರದ ಕಾಂಗ್ರೆಸ್ ಮುಖಂಡ ಶ್ರೇಯಸ್ ಪಟೇಲ್ ಅವರಿಂದ ಶುಭಾಶಯ ಸ್ವೀಕರಿಸಿದ ಸಚಿವರು, ಹೊಳೆನರಸೀಪುರ ಪುರಸಭೆ 12ನೇ ವಾರ್ಡ್ ನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ ಹಿನ್ನೆಲೆಯಲ್ಲಿ ಕಂಗ್ರಾಜುಲೇಷನ್ಸ್ ಎಂದು ಅಭಿನಂದಿಸಿದರು.