ಸರತಿ ಸಾಲಿ‌ನಲ್ಲಿ ನಿಂತು ಮತದಾನ ಮಾಡಿದ ಡಿಸಿ ಸತ್ಯಭಾಮ

ಹಾಸನ: ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಹಾಸನದ ಹೊಳೆನರಸೀಪುರ ರಸ್ತೆಯಲ್ಲಿರುವ ಸಂತ ಫಿಲೋಮಿನಾ ಶಾಲೆಯ‌ ಮತಗಟ್ಟೆ ಸಂಖ್ಯೆ 208 ರಲ್ಲಿ ಸಿ.ಸತ್ಯಭಾಮ ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು.

ಮತ ಚಲಾಯಿಸಿದ ಶಾಸಕ:

ಹಾಸನ ಕ್ಷೇತ್ರದ ಶಾಸಕ ಎಚ್‌.ಪಿ.ಸ್ವರೂಪ್‌ಪ್ರಕಾಶ್ ತಮ್ಮ ಪತ್ನಿ ಶ್ವೇತಾ ಜೊತೆ ಆಗಮಿಸಿ ಹಾಸನ ನಗರದ ರಾಯಲ್ ಅಪೊಲೋ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 121 ರಲ್ಲಿ ಪತ್ನಿ ಸಮೇತ ಹಕ್ಕು ಚಲಾಯಿಸಿದರು.