ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ಮೇಲೆ ನಾಲ್ಕು ತಿಂಗಳು ವಾಹನಗಳ ಸಂಚಾರ ನಿಷೇಧ!

ಮೇಲ್ಸೇತುವೆ ಮೇಲಿನ ಸಂಚಾರ; ಮತ್ತೆ ನಾಲ್ಕು ತಿಂಗಳು ನಿಷೇಧ

ಹಾಸನ: ರೈಲ್ವೆ ಸೇತುವೆ ಕಾಮಗಾರಿ ಹಿನ್ನೆಲೆ, ಹೊಳೆನರಸೀಪುರ ತಾಲ್ಲೂಕು ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ಮೇಲೆ
ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಮತ್ತೆ ನಿಷೇಧ ಮಾಡಿ ಜಿಲ್ಲಾಧಿಕಾರಿ ಸತ್ಯಭಾಮ ಸಿ ಆದೇಶ ಹೊರಡಿಸಿದ್ದಾರೆ.
ಅ.೨೫ ರಿಂದ ೨೦೨೪ ಫೆ.೧೮ ರವರೆಗೆ ರೈಲ್ವೆ ಸೇತುವೆ ದುರಸ್ತಿ ಕಾಮಗಾರಿ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಸದರಿ ಮೇಲ್ಸೇತುವೆ ಮೇಲೆ ವಾಹನಗಳ ಸಂಚಾರ ಓಡಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಅಲ್ಲಿಯವರೆಗೂ ಬದಲಿ ಮಾರ್ಗದಲ್ಲಿ ವಾಹನ ಓಡಾಡಲು ಸೂಚಿಸಲಾಗಿದೆ.
ರಾಷ್ಟಿçÃಯ ಹೆದ್ದಾರಿ ೩೭೩ ಹಾಸನ-ಮೈಸೂರು ಸಂಪರ್ಕ ಕಲ್ಪಿಸುವ ರಸ್ತೆ ನಡುಗೆ ಮೇಲ್ಸೇತುವೆ ಇದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಕೆಲ ತಿಂಗಳ ಹಿಂದೆ ಮಳೆ ಹಿನ್ನೆಲೆ ರೈಲ್ವೆ ಮೇಲ್ಸೇತುವೆ ಕುಸಿದಿತ್ತು.
ಹಾಗಾಗಿ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಅದಾದ ಕೆಲ ದಿನಗಳ ನಂತರ ಕಾರು ಹಾಗೂ ಇತರೆ ಸಣ್ಣ ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ನಾಲ್ಕು ತಿಂಗಳ ಕಾಲ ಎಲ್ಲಾ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಿದ್ದು, ಈ ವಾಹನಗಳು ಹೊಳೆನರಸೀಪುರ-ಪಡುವಲಹಿಪ್ಪೆ-ಹಂಗರಹಳ್ಳಿ-ಹಾಸನ ಮಾರ್ಗವಾಗಿ ಭಾರೀ ವಾಹನ ಹಾಗೂ ಹಳೇಕೋಟೆ-ಕಬ್ಬಿನಹಳ್ಳಿ-ಹೊಸಹಳ್ಳಿ ಮಾರ್ಗವಾಗಿ ಲಘು ವಾಹನಗಳು ಸಂಚರಿಸುವAತೆ ಸೂಚನೆ ನೀಡಲಾಗಿದೆ.