ಹಾಸನ: ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಹಾಸನ ಉಪವಿಭಾಗಾಧಿಕಾರಿ ಜೆ.ಬಿ. ಮಾರುತಿ ಹಾಗೂ ಜಿಲ್ಲೆಯ ಐವರು ತಹಸೀಲ್ದಾರರು ಅತ್ಯುತ್ತಮ ಕಂದಾಯ ಅಧಿಕಾರಿ-2024 ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಅತ್ಯುತ್ತಮವಾಗಿ ಒದಗಿಸಿರುವ ಕಂದಾಯ ಅಧಿಕಾರಿಗಳ ಸೇವೆಯನ್ನು ಗುರುತಿಸಿ ಕಂದಾಯ ಆಯುಕ್ತಾಲಯದ ವತಿಯಿಂದ ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ-2024 ಪ್ರಶಸ್ತಿ ನೀಡಲಾಗುತ್ತದೆ.
ಹಾಸನ ಡಿಸಿ ಸಿ.ಸತ್ಯಭಾಮ, ಉಪವಿಭಾಗಾಧಿಕಾರಿ ಮಾರುತಿ ಜೆ.ಬಿ, ಅರಸೀಕೆರೆ ತಹಶೀಲ್ದಾರ್ ಎಂ.ಜಿ ಸಂತೋಷಕುಮಾರ್, ಅರಕಲಗೂಡು ತಹಶೀಲ್ದಾರ್ ಬಸವರೆಡ್ಡೆಪ್ಪ ರೋಣದ, ಹಾಸನ ತಹಶೀಲ್ದಾರ್ ಶ್ವೇತಾ ಎಂ. ರವೀಂದ್ರ, ಹೊಳೆನರಸೀಪುರ ತಹಶೀಲ್ದಾರ್ ಕೆ.ಕೆ ಕೃಷ್ಣಮೂರ್ತಿ, ಬೇಲೂರು ತಾಲ್ಲೂಕಿನ ಗ್ರಾಮ ಆಡಳಿತ ಅಧಿಕಾರಿ ಮೋಹನ್ ಕುಮಾರ್.ಜಿ ಅವರು 2024 ರ ಕಂದಾಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸೆ.27 ರಂದು ಬೆಳಿಗ್ಗೆ 10 ಗಂಟೆಗೆ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ವಿಕಾಸ ಸೌಧ ಕೊಠಡಿ ಸಂಖ್ಯೆ 419 ರಲ್ಲಿ ಆಯೋಜಿಸಿರುವ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಹಾಗೂ ಅಭಿನಂದನಾ ಸಭೆಯಲ್ಲಿ ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ-2024 ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಕಂದಾಯ ಆಯುಕ್ತರು ತಿಳಿಸಿದ್ದಾರೆ,