ಹಾಸನ: ವರ್ಷದಲ್ಲಿ ಒಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬ ದೇವಿಯ ದರ್ಶನ ಭಾಗ್ಯ ಪಡೆಯಲು ಹೊರ ರಾಜ್ಯ ಹಾಗೂ ರಾಷ್ಟ್ರಗಳಿಂದಲೂ ಭಕ್ತರು ಆನ್ ಲೈನ್ ಮೂಲಕ ಟಿಕೆಟ್ ಖರೀದಿ ಮಾಡುತ್ತಿದ್ದಾರೆ.
ಈಗಾಗಲೇ ಆ್ಯಪ್ ಮೂಲಕ ಇದುವರೆಗೆ ಸುಮಾರು ₹7 ಲಕ್ಷಕ್ಕೂ ಹೆಚ್ಚು ಮೊತ್ತದ ಟಿಕೆಟ್ ಮಾರಾಟವಾದರೆ, ಆಫ್ ಲೈನ್ ಮೂಲಕ ₹10 ಲಕ್ಷಕ್ಕೂ ಹೆಚ್ಚು ಮೊತ್ತದ ಟಿಕೆಟ್ ಮಾರಾಟವಾಗಿದೆ.
ಅಮೆರಿಕ, ಮಲೇಷಿಯಾ, ರೊಮೇನಿಯಾ, ಜರ್ಮನಿ, ಹೊರರಾಜ್ಯದ ನಗರವಾದ ಚೆನ್ನೈ, ಕೊಚ್ಚಿ, ಜಮ್ಮು-ಕಾಶ್ಮೀರಗಳಿಂದಲೂ ಟಿಕೆಟ್ ಗಳು ಬುಕ್ ಆಗಿದೆ ಎಂದು ದೇವಸ್ಥಾನ ಆಡಳಿತ ಅಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಮಾರುತಿ ತಿಳಿಸಿದ್ದಾರೆ.
ಆ್ಯಪ್ ಮೂಲಕ ಟಿಕೆಟ್ ಮಾರಾಟವಾಗುವಾಗ ಅದುಲೊಕೇಶನ್ ಮಾಹಿತಿಯನ್ನೂ ಸಂಗ್ರಹಿಸುತ್ತದೆ. ಮುಂದಿನ ಎಂಟು ದಿನ ದರ್ಶನದ ಅವಧಿಯಲ್ಲಿ ಭಾರಿ ಸಂಖ್ಯೆಯಲ್ಲಿ ಆನ್ ಲೈನ್ ಮೂಲಕ ಟಿಕೆಟ್ ಮಾರಾಟವಾಗುವ ಸಾಧ್ಯತೆ ಇದೆ.