ಹಾಸನ : ಸಕಲೇಶಪುರ ತಾಲ್ಲೂಕಿನ, ಹೆಬ್ಬನಹಳ್ಳಿಯಲ್ಲಿ ಎತ್ತಿನಹೊಳೆ ಯೋಜನೆ ಮೊದಲ ಹಂತ-೧ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎತ್ತಿನಹೊಳೆ ಯೋಜನೆಯ ಹಿಂದಿನ ಘಟನೆಗಳ ಕುರಿತು ಮೆಲುಕು ಹಾಕಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಇವತ್ತು ಗೌರಿ-ಗಣೇಶ ಹಬ್ಬದ ದಿನ,ಇವತ್ತು ರಾಜ್ಯದ ನೀರಾವರಿ ಇಲಾಖೆಯಲ್ಲಿ ಐತಿಹಾಸಿಕ, ಪವಿತ್ರವಾದ, ಮಹತ್ತರವಾದ ದಿನ.ಗೌರಿ ಹಬ್ಬದ ದಿನ ಗಂಗೆಗೆ ಬಾಗೀನ ಅರ್ಪಿಸಿದ್ದೇವೆ ಎಂದರು.
ಮಾರಮ್ಮನ ಸನ್ನಿಧಿ ಚಿತ್ರದುರ್ಗಕ್ಕೆ ನೀರು ಹರಿಸುತ್ತಿದ್ದೇವೆ.ಹತ್ತು ವರ್ಷದ ನಂತರ ಹೇಳಿದ್ದನ್ನು ಮಾಡಿದ್ದೇವೆ, ನುಡಿದಂತೆ ನಡೆದಿದ್ದೇವೆ.ಹತ್ತು ವರ್ಷ ತಪಸ್ಸು ಮಾಡಿದ್ದೇವೆ ಹತ್ತಾರು ಟೀಕೆಗಳನ್ನು ಎದರಿಸಿದ್ದೇವೆ,ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ.ಬೆಟ್ಟದಿಂದ ನೀರು ಹರಿಸುವುದು ಸುಲಭವಲ್ಲ ಎಂದರು.
ಮುಖ್ಯಮಂತ್ರಿಗಳು ನನಗೆ ಪವರ್ ಮಿನಿಸ್ಟರ್ ಕೊಟ್ಟಿದ್ರು ಕೆಲವರು ಇದನ್ನು ತಡೆಯಲು ಪ್ರಯತ್ನಪಟ್ಟು ಕೋರ್ಟ್‌ಗೆ ಹೋಗಿದ್ದರು.ಮುಖ್ಯಮಂತ್ರಿ ಮೇಲೆ ಒತ್ತಡ ತಂದು ಈ ಯೋಜನೆ ಆಗಲೇಬೇಕು ಎಂದು ಹೇಳಿ, ವೈಯುಕ್ತಿಕ ವಿವಾದಕ್ಕೆ ಯೋಜನೆ ನಿಲ್ಲಬಾರದೆಂದು ಮಾಡಿದ್ದೇವೆ, ಬಯಲುಸೀಮೆಗೆ ಇವತ್ತು ಗಂಗೆ ಹರಿಯುತ್ತಿದ್ದಾಳೆ ಎಂದರು.