ಹಾಸನ: ಮಾರಕ ಡೆಂಗ್ಯೂ ಸೋಂಕಿಗೆ ಹೊಳೆನರಸೀಪುರ ತಾಲೂಕಿನಲ್ಲಿ ಒಂದು ವಾರದ ಅವಧಿಯಲ್ಲಿ ಎರಡನೇ ಬಾಲಕಿಯ ಜೀವ ಬಲಿಯಾಗಿದೆ.
ಹೊಳೆನರಸೀಪುರ ತಾಲ್ಲೂಕಿನ ಗುಡ್ಡೇನಹಳ್ಳಿ ಗ್ರಾಮದ ಲೋಕೇಶ್, ತನುಜಾ ದಂಪತಿಯ ಪುತ್ರಿ ಕಲಾಶ್ರೀ ಜಿ.ಎಲ್. (11) ಮೃತ ಬಾಲಕಿ.
ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಕಲಾಶ್ರೀಗೆ ಹೊಳೆನರಸೀಪುರ ಪಟ್ಟಣದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹಿಮ್ಸ್ ಆಸ್ಪತ್ರೆಗೆ ಶನಿವಾರ ಸಂಜೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೇ ಇಂದು ಬಾಲಕಿ ಸಾವನ್ನಪ್ಪಿದ್ದಾರೆ. ಈ ಮೂಲಕ ಒಂದೇ ವಾರದಲ್ಲಿ ಹೊಳೆನರಸೀಪುರ ತಾಲೂಕಿನಲ್ಲಿ ಡೆಂಗ್ಯೂ ಸೋಂಕಿಗೆ ಇಬ್ಬರು ಹೆಣ್ಣುಮಕ್ಕಳು ಬಲಿಯಾದಂತಾಗಿದೆ.
ಜೂ.28 ರಂದು ಹೊಳೆನರಸೀಪುರ ತಾಲ್ಲೂಕಿನ, ಹಳ್ಳಿಮೈಸೂರು ಗ್ರಾಮದ ಕುಮಾರ್ ಎಂಬವರ ಪುತ್ರಿ ವರ್ಷಿಕ (8) ಡೆಂಗ್ಯೂ ಸೋಂಕಿಗೆ ಬಲಿಯಾಗಿದ್ದಳು.
