ತಿರುಗುವ ಫ್ಯಾನ್ ಮೇಲೆ ಕುಳಿತು ಹೆಡೆಬಿಚ್ಚಿ ಬುಸುಗುಟ್ಟಿದ ನಾಗರಹಾವು!

ಹಾವು ಹಿಡಿದು ಕಾಡಿಗೆ ಬಿಟ್ಟ ಉರಗ ತಜ್ಞ ದಸ್ತಗೀರ್

ಹಾಸನ: ಬೇಸಿಗೆ ಸೆಖೆ ತಣಿಸಲು ಛಾವಣಿಗೆ ಹಾಕಿದ ಸೀಲಿಂಗ್ ಫ್ಯಾನ್ ಮೇಲೆ ಹೆಡೆಬಿಚ್ಚಿದ ನಾಗರಹಾವು ಕುಳಿತು ಬುಸುಗುಟ್ಟಿದರೆ ಹೇಗಿರಬಹುದು?

ಇಂತಹ ಭಯ ಹುಟ್ಟಿಸುವ ಸನ್ನಿವೇಶವನ್ನು ಸಕಲೇಶಪುರ ಪಟ್ಟಣದ, ಹಳೇ ಸಂತೆವೇರಿ ಬಡಾವಣೆಯ ಕುಟುಂಬವೊಂದು ಎದುರಿಸಿದೆ.

ಸಂತೆವೇರಿ ಬಡಾಣೆಯ ಮನೆಯೊಂದರ ಅಟ್ಟದ ಮೇಲೆ ಅಡಗಿ ಕುಳಿತಿದ್ದ ನಾಗರಹಾವು ಕಂಡು ಭಯಭೀತರಾದ ಮನೆ ಮಂದಿ ಕಿರುಚಾಡಿದರು. ಇದರಿಂದ ಗಾಬರಿಯಾದ ಹಾವು ಅಟ್ಟಕ್ಕೆ ಹೊಂದಿಕೊಂಡಂತೆ ಅಳವಡಿಸಿದ್ದ ಸೀಲಿಂಗ್ ಫ್ಯಾನ್ ಏರಿ ಕುಳಿತುಕೊಂಡಿತು.

ಹಾವನ್ನು ಕೆಳಗಿಳಿಸಲು ಮನೆಯವರು ಫ್ಯಾನ್ ಆನ್ ಮಾಡಿದಾಗ ಸಿಟ್ಟಿನಿಂದ ಹೆಡೆ ಎತ್ತಿದ ಸರ್ಪ ಬುಸುಗುಟ್ಟಿತು. ಮನೆಯವರ ಕೋರಿಕೆ ಮೇರೆಗೆ ಆಗಮಿಸಿದ ಉರುಗತಜ್ಞ ದಸ್ತಗೀರ್‌, ಹಾವನ್ನು ಹಿಡಿದು ಕಾಡಿಗೆ ಬಿಟ್ಟರು. ಹಾವು ತಿರುಗುವ ಫ್ಯಾನ್ ಮೇಲೆ ಕುಳಿತು ಬುಸುಗುಡುವ ವಿಡಿಯೋ ವೈರಲ್ ಆಗಿದೆ.