ಚನ್ನರಾಯಪಟ್ಟಣ: ಶ್ರವಣಬೆಳಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ಕೆ.ದಿನೇಶ್ ಬಾಬು ಆಯ್ಕೆ

ಚನ್ನರಾಯಪಟ್ಟಣ:ತಾಲೂಕಿನ ಶ್ರವಣಬೆಳಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಕೆ.ದಿನೇಶ್ ಬಾಬು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದಿನ ಅಧ್ಯಕ್ಷರಾಗಿದ್ದ ಸರೋಜಮ್ಮ ನಾಗರಾಜ್ ರವರ ರಾಜೀನಾಮೆಯಿಂದ ತೆರವುಗೊಂಡಿದ್ದ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣಾ ಪ್ರಕ್ರಿಯೆ ನಡೆಯಿತು.

ಡಿ.ಕೆ.ದಿನೇಶ್ ಬಾಬು ಹೊರತುಪಡಿಸಿ ಮತ್ಯಾರೂ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಯಿತು.

ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ವಿಜಯೇಂದ್ರ ಕರ್ತವ್ಯ ನಿರ್ವಹಿಸಿದರು. ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಬೆಳೆ ಸಾಲ ಹಾಗೂ ಕೃಷಿಗೆ ಸಂಬಂಧಿಸಿದ ಸೌಲಭ್ಯಗಳನ್ನು ಒದಗಿಸಿ, ರೈತರಿಗೆ ನೆರವಾಗಬೇಕು. ಸಹಕಾರ ಸಂಘದ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಫ್ತಾಬ್ ಪಾಷಾ, ಮಾಜಿ ಅಧ್ಯಕ್ಷರಾದ ಶರತ್ ಕುಮಾರ್, ಎಸ್.ಟಿ.ಮಹೇಶ್, ಎಸ್.ಆರ್.ಲೋಕೇಶ್, ಸದಸ್ಯ ಎಸ್.ಬಿ.ಯಶಸ್ ಜೈನ್, ಸಂಘದ ಉಪಾಧ್ಯಕ್ಷೆ ಸವಿತಾ ಯೋಗೇಶ್, ನಿರ್ದೇಶಕರಾದ ಎ.ಸಿ.ರಾಮಕೃಷ್ಣ, ಎಸ್.ಎಂ.ಸಂತೋಷ್, ಎ.ಬಿ.ಕೃಷ್ಣಪ್ಪ, ಮಂಜೇಗೌಡ, ಡಿ.ಆರ್.ಸತೀಶ್, ಶಿವಮೂರ್ತಿ, ಲತಾ ದೇವೇಂದ್ರ, ವೆಂಕಟೇಶ್, ಶಾರದಮ್ಮ, ಬ್ಯಾಂಕ್ ನಾಮಿನಿ ಎಸ್.ಆರ್.ಮಧು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಕೆ.ಮಂಜೇಗೌಡ, ಮುಖಂಡರಾದ ಅಶೋಕ್, ದಿನೇಶ್, ಬಿ.ಟಿ.ರವಿ, ಮೀಸೆ ಮಂಜಣ್ಣ, ರಮೇಶ್, ಸುಕುಮಾರ್ ಮುಂತಾದವರಿದ್ದರು.