ಮಣಿಪುರದಲ್ಲಿ ಅನಾರೋಗ್ಯಕ್ಕೆ ಬಲಿಯಾದ ಹಾಸನದ ಯೋಧ

ಹಾಸನ: ಮಣಿಪುರದಲ್ಲಿ ಕರ್ತವ್ಯದಲ್ಲಿದ್ದ ಹಾಸನ ಮೂಲದ  ಸಿ.ಆರ್.ಪಿ‌.ಎಫ್. ಯೋಧ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಹಾಸನದ ಕೆ.ಆರ್.ಪುರಂ ನಿವಾಸಿ ಪದ್ಮರಾಜು (52) ಮೃತ ಯೋಧ, ಅವರು 31 ವರ್ಷಗಳಿಂದ ಸಿಆರ್ ಪಿಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಮಣಿಪುರದಲ್ಲಿ ಗಲಭೆ ವೇಳೆಯೂ ಸವಾಲಿನ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಶುಕ್ರವಾರ ಮಣಿಪುರದಲ್ಲಿ ಮೃತಪಟ್ಟಿದ್ದಾರೆ. ಕೆ.ಆರ್.ಪುರಂ ನಿವಾಸಕ್ಕೆ ಪದ್ಮರಾಜು ಅವರ ಪಾರ್ಥಿವ ಶರೀರವನ್ನು ತರಲಾಗಿದ್ದು, ನೂರಾರು ಮಂದಿ ಮೃತ ಯೋಧ ಪದ್ಮರಾಜು ವಾರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಇಂದು ಮಧ್ಯಾಹ್ನ ಹಾಸನ ಹೊರವಲಯದ ಬಿಟ್ಟಗೋಡನಹಳ್ಳಿಯ ಚಿತಾಗಾರದಲ್ಲಿ ಪದ್ಮರಾಜು ಅವರ ಅಂತ್ಯಕ್ರಿಯೆ ನಡೆಯಲಿದೆ.
ಅವರಿಗೆ ಪತ್ನಿ, ಓರ್ವ ಪುತ್ರಿ ಇದ್ದಾರೆ. ಪದ್ಮರಾಜು ಕುಟುಂಬದಲ್ಲಿ ನೀರವ ಮೌನ ಆವರಿಸಿದೆ.