ಪೆನ್ ಡ್ರೈವ್ ಹಂಚಿಕೆ ಪ್ರಕರಣ: ಲಿಖಿತ್, ಚೇತನ್ ಗೆ ಮೇ 25ರವರೆಗೆ ನ್ಯಾಯಾಂಗ ಬಂಧನ

ಹಾಸನ : ಸಂಸದ ಪ್ರಜ್ವಲ್‌ರೇವಣ್ಣ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಆರೋಪಿಗಳಿಗೆ  ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಬಂಧಿತ ಚೇತನ್ ಹಾಗೂ ಲಿಖಿತ್‌ ಅವರನ್ನು ಎಸ್ಐಟಿ ತಂಡ ವೈದ್ಯಕೀಯ ಪರೀಕ್ಷೆ ನಂತರ ಜೆಎಂಎಫ್‌ಸಿ ನ್ಯಾಯಾಧೀಶ ಗಿರೀಗೌಡ ಅವರೆದುರು ಹಾಜರುಪಡಿಸಿತು.

ನ್ಯಾಯಾಧೀಶರು ಆರೋಪಿಗಳನ್ನು ಮೇ.25 ರವರೆಗೆ ನ್ಯಾಯಾಂಗ ಬಂಧನಕ್ಕೆ ವಹಿಸಿ ಆದೇಶಿಸಿದರು.