ಹಾಸನ : ಬೇಲೂರು ತಾಲ್ಲೂಕಿನ, ನಂದಗೊಂಡನಹಳ್ಳಿ ಗ್ರಾಮದಲ್ಲಿ ಮರಗಳ ಕಡಿತ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂಸಿಂಹಗೆ ಬೇಲೂರಿನ ಹಿರಿಯ ಸಿವಿಲ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಜಾಮೀನು ದೊರಕಿದ ಬಳಿಕ ಮಾತನಾಡಿದ ವಿಕ್ರಂಸಿಂಹ, ಇದರಲ್ಲಿ ಸತ್ಯಕ್ಕೆ ಜಯ ಸಿಕ್ಕಿದೆ. ನನಗೆ ನ್ಯಾಯ ಸಿಗಲು ನೀವೆಲ್ಲರೂ ಸಹಕಾರ ಕೊಟ್ಟಿದ್ದೀರಿ. ನನಗೆ ತುಂಬಾ ಖುಷಿಯಾಗಿದೆ ಎಂದರು.
ನಾನು ಬರೀ ಬೆಳೆ ಬೆಳೆಯಲಿಕ್ಕೋಸ್ಕರ ಹೋದವನು . ಈ ತರಹದ ಆರೋಪಗಳನ್ನು ಎದುರಿಸಬೇಕಾಗಿ ಬಂತು.
ಇದೆಲ್ಲ ಒಂದು ರೀತಿ ರಾಜಕೀಯ ಪಿತೂರಿ,
ಸತ್ಯಕ್ಕೆ ಜಯ ನ್ಯಾಯಾಲಯದಲ್ಲಿ ಸಿಕ್ಕಿದೆ ಎಂದರು.