ದೇವೇಗೌಡರನ್ನು ಪುಟ್ಟಸ್ವಾಮಿಗೌಡರು ಸೋಲಿಸಿದ ರೀತಿ ಶ್ರೇಯಸ್ ಪಟೇಲ್ ಫಲಿತಾಂಶ ಬರಬೇಕು;‌ ಕೆ.ಎನ್.ರಾಜಣ್ಣ ಕರೆ

ಹಾಸನ: ಜೆಡಿಎಸ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಮುದ್ದಹನುಮೇಗೌಡರ ಟಿಕೆಟ್ ಕಸಿದಿದ್ದೇ ಕಳೆದ‌ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಸೋಲಿಗೆ ಕಾರಣ ಎಂದರು.

ನಗರದ ಖಾಸಗಿ‌ ಹೋಟೆಲ್ ನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಬೆಂಬಲಿಸುವ ಕುರಿತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ತುಮಕೂರಿನಲ್ಲಿ ಮುದ್ದಹನುಮೇಗೌಡರು ಸಿಟ್ಟಿಂಗ್ ಎಂಪಿ ಇದ್ದರು, ಅವನು ಕೂಡ ಒಕ್ಕಲಿಗನೇ. ಅವನನ್ನು ಮುಗಿಸಿ ದೇವೇಗೌಡರು ಟಿಕೆಟ್ ತಗೆದುಕೊಂಡರು. ಅದನ್ನು ತುಮಕೂರು ಜಿಲ್ಲೆಯ ಜನ ಸಹಿಸಲಿಲ್ಲ, ಹಾಗಾಗಿ ಅವರಿಗೆ ಸೋಲಾಯಿತು ಎಂದು ವಿಶ್ಲೇಷಣೆ ಮಾಡಿದರು.

ಬೇರೆಯವರು ನಾನು, ಇನ್ನೊಬ್ಬ ಸೋಲಿಗೆ ಕಾರಣ ಎನ್ನಬಹುದು. ಆದರೆ ಎಲ್ಲಾ ಕಾರಣಗಳು ಸೇರಿಕೊಂಡು ಅವರನ್ನು ಸೋಲಿಸಿದವು ಎಂದರು.

ಈ‌ ಹಿಂದೆ ಹಾಸನದಲ್ಲಿ ಹೇಗೆ ಪುಟ್ಟಸ್ವಾಮಿಗೌಡರು ದೇವೇಗೌಡರನ್ನು ಸೋಲಿಸಿದ್ದರೋ‌ ಹಾಗೆಯೇ ಶ್ರೇಯಸ್ ಪಟೇಲ್ ದೇವೇಗೌಡರ ಕುಟುಂಬದವರನ್ನು ಸೋಲಿಸಬೇಕು. ಪುಟ್ಟಸ್ವಾಮಿಗೌಡರ ಮೊಮ್ಮಗ ಗೆಲ್ಲಬೇಕು ಎಂದರು.

ಇಲ್ಲಿ ಪ್ರಚಾರಕ್ಕೆ ಸಿದ್ದರಾಮಯ್ಯ ಅವರು ಬರ್ತಾರೆ, ಶಿವಕುಮಾರ್ ಅವರು ಬರ್ತಾರೆ.
ಮುನಿಯಪ್ಪ, ಮಹದೇವಪ್ಪ, ಜಮೀರ್ ಸಾಹೇಬ್ರು ಬರ್ತಾರೆ ಎಲ್ಲರೂ ಕೂಡ ಬಂದು ಮತಯಾಚನೆ ಮಾಡ್ತಾರೆ ಎಂದರು.

ಈ ಬಾರಿ ಶ್ರೇಯಸ್‌ಪಟೇಲ್ ಅವರನ್ನು ಗೆಲ್ಲಿಸಬೇಕು