ಹಾಸನ: ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸುವುದಾಗಲಿ, ಮುಂದುವರಿಸುವುದಾಗಲೀ ನಮ್ಮ ಪಕ್ಷದ ಹೈಕಮಾಂಡ್ ಇಚ್ಛೆಗೆ ಬಿಟ್ಟ ವಿಚಾರ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬಗ್ಗೆ ನಾವು-ನೀವು ಚರ್ಚೆ ಮಾಡಿದರೆ ನಾವೇನೂ ಬದಲಾಯಿಸುವವರಲ್ಲ, ಇಟ್ಟುಕೊಳ್ಳುವವರೂ ಅಲ್ಲ.
ನನ್ನ ಹೆಸರು ಕೇಳಿ ಬರಲಿ, ಕೇಳಿ ಬಾರದೇ ಇರಲಿ. ಪಕ್ಷದವರು ನೀನು ಅಧ್ಯಕ್ಷನಾಗು ಎಂದರೆ ನಾನು ಸಚಿವ ಸ್ಥಾನ ಬಿಡ್ತಿನಿ, ಅಧ್ಯಕ್ಷ ಆಗ್ತಿನಿ. ನಾನು ಅಧಿಕಾರಕ್ಕೆ ಯಾವತ್ತೂ ಅಂಟಿಕೊಳ್ಳುವವನಲ್ಲ ಎಂದರು.
ಸಿಎಂ ಆಗುವ ಆಸೆ ಇದೆ ಎಂಬ ಸಚಿವ ಸತೀಶ್ ಜಾರಕಿಹೋಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಜಾಗ ಖಾಲಿ ಇದೆಯಾ? ಖಾಲಿ ಇದ್ದಾಗ ಯಾರು ಎಂಬ ಪ್ರಶ್ನೆ ಬರುತ್ತದೆ. ಖಾಲಿ ಇಲ್ಲದೇ ಇದ್ದಾಗ ಏಕೆ ಪ್ರಶ್ನೆ ಬರುತ್ತದೆ? ಎಂದರು.