ಚನ್ನರಾಯಪಟ್ಟಣ: ಹಣ ಹಾಗೂ ಆಸ್ತಿ ಸಂಪಾದನೆಗಿಂತ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದು ಅತಿಮುಖ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲೂಕಿನ ಹಿರೀಸಾವೆಯಲ್ಲಿ ನೂತನವಾಗಿ ತೆರೆದಿರುವ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಅದೆಷ್ಟೇ ಸಂಪಾದಿಸಿದರೂ ಆರೋಗ್ಯವೇ ಸರಿ ಇಲ್ಲದ ಮೇಲೆ ಎಲ್ಲವೂ ವ್ಯರ್ಥ ಎಂದರು.
ಭಾರತವೂ ಕೃಷಿ ಪ್ರಧಾನ ದೇಶವಾಗಿದ್ದು ಸದಾ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ನಮ್ಮ ರೈತರು ತಮ್ಮ ಆರೋಗ್ಯದ ಕಡೆಗೂ ಸಾಕಷ್ಟು ಗಮನ ಹರಿಸಬೇಕಿದೆ. ವರ್ಷದಲ್ಲಿ ಒಂದೆರೆಡು ಬಾರಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡ, ಮಧುಮೇಹ ಹಾಗೂ ಇತರೆ ಕಾಯಿಲೆಗಳು ಸಮಾನ್ಯವಾಗಿವೆ. ಯಾರ ಮನೆಯಲ್ಲಿ ನೋಡಿದರೂ ಟೇಬಲ್ ಮೇಲೆ ಹತ್ತಾರು ಬಗೆಯ ಮಾತ್ರೆಗಳ ಡಬ್ಬಿಗಳು ಇರಲಿವೆ. ದಯವಿಟ್ಟು ಪ್ರತಿದಿನ ಕಾಲ್ನೆಡುಗೆ ಜತೆಗೆ ವ್ಯಾಯಾಮ ಮಾಡುವ ಅವ್ಯಾಸ ರೂಡಿಸಿಕೊಂಡು ಉತ್ತಮ ಆಹಾರ ಸೇವನೆಯೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರವಿಕುಮಾರ್, ಅಂಗಡಿ ಮಾಲೀಕ ಎಚ್.ಎಸ್.ಶಿವಪ್ಪ, ಪ್ರಮುಖರಾದ ರಕ್ಷಿತ್, ರೋಹನ್ ಹಾಗೂ ಇತರರು ಇದ್ದರು.