ಹಾಸನ: ಪೆನ್‌ಡ್ರೈವ್ ವಿಡಿಯೋ ವೈರಲ್ ಪ್ರಕರಣದಲ್ಲಿ ವಕೀಲ ದೇವರಾಜೇಗೌಡ ಅವರನ್ನು ಇನ್ನೆರಡು ದಿನ ಎಸ್ಐಟಿ ವಶಕ್ಕೆ ನೀಡಿ ಹಾಸನದ ಐದನೇ ಅಧಿಕ ಸಿವಿಲ್ ನ್ಯಾಯಾಲಯ ಶನಿವಾರ ಆದೇಶ ನೀಡಿದೆ.
ನಿನ್ನೆಯಷ್ಟೇ ಎಸ್ಐಟಿ ಕಸ್ಟಡಿಗೆ ಪಡೆದಿದ್ದ ದೇವರಾಜೇಗೌಡರನ್ನು ಇಂದು ಕೋರ್ಟ್‌ಗೆ ಕರೆತಂದಿದ್ದ ಎಸ್‌ಐಟಿ ತಂಡ ಹೆಚ್ಚಿನ ವಿಚಾರಣೆ ಅಗತ್ಯ ಇರುವುದರಿಂದ ಇನ್ನೂ ಎರಡು ದಿನ ಕಸ್ಟಡಿಗೆ ನೀಡುವಂತೆ ಮನವಿ ಸಲ್ಲಿಸಿತ್ತು.
ಮನವಿ ಪುರಸ್ಕರಿಸಿದ ನ್ಯಾಯಾಧೀಶರು ದೇವರಾಜೇಗೌಡರನ್ನು ಮೇ.20ರ ಸಂಜೆ 5 ಗಂಟೆಯವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿದರು.
ನಿನ್ನೆ ಕೋರ್ಟ್‌ನಿಂದ ಹೊರ ಬರುವ ವೇಳೆ ಹೇಳಿಕೆ ನೀಡಿದ್ದ ದೇವರಾಜೇಗೌಡ ವಿವಾದ ಸೃಷ್ಟಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಇಂದು ಕೋರ್ಟ್ ಬಳಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.