ವಶಕ್ಕೆ ಪಡೆದಿದ್ದ ಚೇತನ್, ಲಿಖಿತ್ ರನ್ನು ಸ್ಥಳ ಮಹಜರ್ ಗೆ ಕರೆದೊಯ್ದ ಎಸ್ಐಟಿ ತಂಡ

ಹಾಸನ: ಸಂಸದ ಪ್ರಜ್ವಲ್‌ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಇರುವ ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಚೇತನ್ ಹಾಗೂ ಲಿಖಿತ್ ಅವರನ್ನು ಎಸ್ಐಟಿ ಅಧಿಕಾರಿಗಳು ಸ್ಥಳ ಮಹಜರ್ ಗೆ ಕರೆದೊಯ್ದಿದ್ದಾರೆ.

ನಗರದ ಎನ್.ಆರ್.ವೃತ್ತದಲ್ಲಿರುವ ಸೆನ್ ಪೊಲೀಸ್ ಠಾಣೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಅಧಿಕಾರಿಗಳು, ಪ್ರತ್ಯೇಕ ವಾಹನಗಳಲ್ಲಿ ಲಿಖಿತ್ ಹಾಗೂ ಚೇತನ್‌ನನ್ನು ಸ್ಥಳ ಮಹಜರ್‌ಗೆ ಕರೆದೊಯ್ದಿದ್ದಾರೆ.