ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸೋಮವಾರ NRIG ಯೋಜನೆಯಡಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು.
ಗಿಡ ನೆಟ್ಟು ಮಾತನಾಡಿದ ಅವರು, ಸಸಿಗಳನ್ನು ನೆಡುವುಷ್ಟೇ ಕಾಳಜಿಯನ್ನು ಅವುಗಳ ರಕ್ಷಣೆಗೆ ಬೇಲಿ ನಿರ್ಮಿಸಿ ಸಮಯಕ್ಕೆ ಸರಿಯಾಗಿ ನೀರು ಉಣಿಸಿನಿರ್ವಹಣೆ ಮಾಡುವುದಕ್ಕೂ ವಹಿಸಬೇಕು ಎಂದರು.
ಜುಟ್ಟನಹಳ್ಳಿ-ಶ್ರವಣಬೆಳಗೊಳ ಏತ ನೀರಾವರಿ ಯೋಜನೆಯ ಮೋಟರ್ ಗಳನ್ನು ಚಾಲನೆ ಮಾಡಿ ಹಿರೀಸಾವೆ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಭರವಸೆ ನೀಡಿದರು. ಹಿರೀಸಾವೆ ಗ್ರಾಮದ ದೊಡ್ಡ ಕೆರೆಯ ಏರಿ ಹಾಗೂ ಕೋಡಿಯ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬೋರಣ್ಣ, ಮಾಜಿ ಅಧ್ಯಕ್ಷ ಮಹೇಶ್, ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಮೋದ್, ಪ್ರಮುಖರಾದ ರವಿಕುಮಾರ್ ಹಾಗೂ ಇತರರು ಇದ್ದರು.