ಮಾಸ್ಟರ್ಸ್ ಪಿಯು ಕಾಲೇಜು ಹಾಸ್ಟೆಲ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ; ಕೊಲೆ ಆರೋಪ

ಹಾಸನ : ನಗರದ ಮಾಸ್ಟರ್ಸ್ ಕಾಲೇಜಿನ ಹಾಸ್ಟೆಲ್ ಕೋಣೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬನ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತನನ್ನು ಹತ್ಯೆ‌ ಮಾಡಲಾಗಿದೆ ಎಂದು ಆರೋಪಿಸಿರುವ ಸಂಬಂಧಿಕರು ಕಾಲೇಜು ಮುಖ್ಯಸ್ಥರು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ.

ವಿಕಾಸ್ (18) ಮೃತ ವಿದ್ಯಾರ್ಥಿ, ಅವರು ಚನ್ನರಾಯಪಟ್ಟಣ ತಾಲ್ಲೂಕು, ಬೆಳಗುಲಿ ಗ್ರಾಮದ ಸುರೇಶ್, ಮಮತಾ ದಂಪತಿ ಏಕೈಕ ಪುತ್ರ.

ಮಾಸ್ಟರ್ ಕಾಲೇಜಿನಲ್ಲಿ ದ್ವೀತಿಯ
ದ್ವಿತೀಯ ಪಿಯುಸಿ ಓದುತ್ತಿದ್ದ ವಿಕಾಸ್, ಇಂದು ಕಾಲೇಜಿಗೆ ತೆರಳಿ ತರಗತಿಗೆ ಹಾಜರಾಗಿ ನಂತರ ಒಬ್ಬರೇ ಹಾಸ್ಟೆಲ್‌ಗೆ ಮರಳಿದ್ದರು.

ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕಾಲೇಜು ಮುಖ್ಯಸ್ಥರು ಬರುವವರೆಗೂ ಶವ ಮೇಲೆತ್ತಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಬಡಾವಣೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.