ಪೆನ್ ಡ್ರೈವ್ ಹಂಚಿಕೆ ಪ್ರಕರಣ: ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ ಎಸ್ಐಟಿ

ಹಾಸನ : ಪ್ರಜ್ವಲ್‌ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ, ಫೋಟೋಗಳಿರುವ ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರಾದ ಚೇತನ್ ಹಾಗೂ ಲಿಖಿತ್ ಅವರನ್ನು ಎಸ್ಐಟಿ ತಂಡ ಬಂಧಿಸಿದೆ.

ಚೇತನ್‌‌ನನ್ನು ಆತನ ಸ್ವಗ್ರಾಮ ಹಾಸನ ತಾಲೂಕಿನ ಯಲಗುಂದ ಗ್ರಾಮಕ್ಕೆ ಎಸ್‌ಐಟಿಯ ಒಂದು ತಂಡ ಕರೆತಂದು ಮಹಜರ್ ನಡೆಸಿದ್ದು, ಲಿಖಿತ್‌ನನ್ನು ಶ್ರವಣಬೆಳಗೊಳಕ್ಕೆ ಕರೆದೊಯ್ದು ಪ್ರತ್ಯೇಕವಾಗಿ ಸ್ಥಳ‌ ಮಹಜರ್‌ ಮಾಡಿತು.

ಸ್ಥಳ ಮಹಜರ್ ಮುಗಿದ ತಕ್ಷಣ ಇಬ್ಬರನ್ನೂ ಎಸ್‌ಐಟಿ ಬಂಧಿಸಿದೆ. ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರೇ ಬಂಧಿತರಾಗಿರುವುದು ಕೇಸ್ ಗೆ ಹೊಸ ತಿರುವು‌ ನೀಡಿದೆ.