ನಮ್ಮ ವಿರುದ್ಧ ಸಭೆ ಕರೆದವರು ಯಾರು ಅಂತ ಅವರ ಬೀದಿಯವರಿಗೂ ಗೊತ್ತಿಲ್ಲ: ಯತ್ನಾಳ ಬಣಕ್ಕೆ ಟಾಂಗ್ ನೀಡಿದ ವಿಜಯೇಂದ್ರ

ಹಾಸನ: ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದ ಸಭೆಯ ಕುರಿತಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ಅಂಥ ಸಭೆಗಳಿಗೆ ಪಕ್ಷದ ನೇರ ಅಥವಾ ಪರೋಕ್ಷ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯಡಿಯೂರಪ್ಪ ಮತ್ತು ನನ್ನ ವಿರುದ್ಧ ಸಭೆ
ಇತ್ತೀಚೆಗೆ ಕೆಲವು ಸಮಾಜ ಮುಖಂಡರೆಂದು ಕರೆಯಲ್ಪಡುವವರಿಂದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ನನ್ನ ವಿರುದ್ಧ ಸಭೆ ಆಯೋಜನೆಯಾಗಿತ್ತು. ಆದರೆ, ಅವರಲ್ಲಿ ಕೆಲವು ಪ್ರಮುಖರನ್ನು ಬಿಟ್ಟರೆ ಉಳಿದವರು ಯಾರು ಅಂತ ಅವರ ಬೀದಿ-ಕೇರಿಯಲ್ಲೂ ಗೊತ್ತಿಲ್ಲ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.

ಸಮಾಜ ಮುಖಂಡರ ಸಭೆ ಕರೆಯುವುದು ಸರಿಯಲ್ಲ
“ನಾವು ಸಮಾಜದ ಮುಖಂಡರ ಸಭೆ ಕರೆಯುವುದು ಸೂಕ್ತವಲ್ಲ. ಅವರು ಏನಾದರೂ ಸಭೆ ಆಯೋಜಿಸಿದರೆ ಬಹುಕಾಲ ಕಾದು ನೋಡುವಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ರೀತಿಯ ಸಭೆಗಳನ್ನು ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿ ಒಪ್ಪಿಕೊಳ್ಳುವುದಿಲ್ಲ,” ಎಂದು ವಿಜಯೇಂದ್ರ ತಾಕೀತು ಮಾಡಿದರು.

ಪಕ್ಷದ ಹಿತದೃಷ್ಟಿಯಿಂದ ತೀರ್ಮಾನ
“ಇಂತಹ ಸಭೆಗಳನ್ನು ನಡೆಸುವುದರಿಂದ ಪಕ್ಷಕ್ಕೆ ಯಾವುದೇ ಲಾಭವಾಗುವುದಿಲ್ಲ. ಈಗಾಗಲೇ ಹಲವು ಗೊಂದಲಗಳಿದ್ದು ಮಧ್ಯೆ ಹೊಸ ಗೊಂದಲಕ್ಕೆ ನಾಂದಿ ಹಾಡಬಾರದು,” ಎಂದು ಅವರು ಅಭಿಪ್ರಾಯಪಟ್ಟರು.

ರೇಣುಕಾಚಾರ್ಯರೊಂದಿಗೆ ವೈಯುಕ್ತಿಕವಾಗಿ ಚರ್ಚೆ
“ನಾನು ರೇಣುಕಾಚಾರ್ಯರೊಂದಿಗೆ ವೈಯುಕ್ತಿಕವಾಗಿ ಮಾತನಾಡುತ್ತೇನೆ. ಹೀಗೇ ಮುಂದುವರಿಸಿದರೆ ಅದು ಶೋಭೆ ತರುವುದಿಲ್ಲ. ಈಗಾಗಲೇ ಪರಿಸ್ಥಿತಿ ತಿಳಿಯಾಗುತ್ತಿರುವಾಗ ಇಂತಹ ಸಭೆಗಳು ಬೇಡ,” ಎಂದು ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

“ಸಭೆ ಆಯೋಜಿಸಿರುವವರನ್ನು ಕೂರಿಸಿ ನಾನು ಮಾತನಾಡುತ್ತೇನೆ. ಇದನ್ನು ಬಹಿರಂಗವಾಗಿ ಚರ್ಚಿಸುವ ಅಗತ್ಯವಿಲ್ಲ,” ಎಂದು ವಿಜಯೇಂದ್ರ ಹೇಳಿದರು.