ಹಾಸನ: ರಾಜಕಾರಣದಲ್ಲಿ ಅಣ್ಣ-ತಮ್ಮ ಆಗಲು ಆಗಲ್ಲ, ಅವರ ತಮ್ಮನನ್ನು ಪಕ್ಕದಲ್ಲಿ ಕೂರಿಸಿಕೊಂಡಿರುತ್ತಾರೆ, ಅವರ ತಮ್ಮನ ಹತ್ತಿರವೇ ಮಾತನಾಡಿಕೊಳ್ಳಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂ ಜೆ.ಗೌಡ ತಿರುಗೇಟು ನೀಡಿದರು.
ಸೋಮವಾರ ಬೆಳಗ್ಗೆ ಚನ್ನಂಗಿಹಳ್ಳಿಯಲ್ಲಿ ಮಾತನಾಡಿದ ಎಚ್.ಡಿ.ಕೆ. ಪ್ರೀತಂ ಕೂಡ ಒಬ್ಬ ತಮ್ಮ, ಕೂತು ಮಾತಾಡುತ್ತೇನೆ ಎಂದಿದ್ದರು. ಅದಕ್ಕೆ ಪ್ರೀತಂ ತೀಕ್ಷ್ಣ ತಿರುಗೇಟು ಕೊಟ್ಟರು.
ಹಾಸನದಲ್ಲಿ ಪ್ರೀತಂಗೌಡ ಶಕ್ತಿ ಏನು ಅನ್ನೋದು ಅವರಿಗೆ ಅರ್ಥ ಆಗಿರುತ್ತೆ. ನನ್ನ ಜೊತೆ ಕುಳಿತು ಮಾತನಾಡುವ ಬದಲು ಅವರು ಶಾಸಕರ ಜೊತೆ ಕುಳಿತು ಮಾತನಾಡುವುದು ಒಳ್ಳೆಯದು ಎಂದು ಕಿಡಿಕಾರಿದರು.
ನಾನೇನು ಮಾಡಬೇಕೆಂದು ನಮ್ಮ ಪಕ್ಷ ತೀರ್ಮಾನ ಮಾಡುತ್ತೆ. ಅದನ್ನ ಬೇರೆ ಪಕ್ಷದವರು ಹೇಳವಂತದ್ದೇನು ಪ್ರಸ್ತುತ ಅಲ್ಲ, ನಮ್ಮ ಪಕ್ಷದವರು ತೀರ್ಮಾನ ಮಾಡ್ತಾರೆ ಎಂದರು.
2023 ರಲ್ಲಿ ಉತ್ಸಾಹದಲ್ಲಿ ಪ್ರೀತಂಗೌಡರನ್ನು ಸೋಲಿಸಿ ಅಂತ ಹೇಳಿದಾಗಲೂ ಹಾಸನದ ಜನ 78 ಸಾವಿರ ಓಟು ಹಾಕಿದ್ದಾರೆ.7 8 ಸಾವಿರ ಮತಗಳು ಪ್ರೀತಂಗೌಡ ಪರವಾಗಿ, ಅವರ ವಿರುದ್ಧವಾಗಿ ಬಿದ್ದಿರುವ ಮತಗಳು ಅನ್ನುವುದು ಅವರ ಮನಸ್ಸಿನಲ್ಲಿ ಇಟ್ಟುಕೊಳ್ಳಲಿ. 84 ಸಾವಿರ ಮತಗಳನ್ನು ಅವರ ಅಭ್ಯರ್ಥಿ ತಗೊಂಡಿದ್ದಾರೆ ಆ ಬೂತ್‌ಗಳ ಪಟ್ಟಿಯನ್ನು ಇಟ್ಟುಕೊಂಡಿರಲಿ, ಆ 84 ಸಾವಿರದಲ್ಲಿ ಈಗ 44 ಸಾವಿರ ಎಲ್ಲಿ ಹೋಗಿ ಕುಳಿತುಕೊಂಡಿದೆ ಅನ್ನೋದನ್ನ ನೋಡಿದರೆ ಪ್ರೀತಂಗೌಡನ ಶಕ್ತಿ ಏನು?
ಅವರು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಏನು ಗೆಲ್ಲಿಸಿಕೊಂಡಿದ್ದಾರೆ? ಅವರ ಶಕ್ತಿ ಏನು ಎಂದು ಅರ್ಥವಾಗಿ ಬಿಡುತ್ತೆ ಎಂದು ಟಾಂಗ್ ನೀಡಿದರು. ಉಳಿದಿದ್ದನ್ನು ನಮ್ಮ ಪಕ್ಷದ ಹಿರಿಯರು ಮಾತನಾಡುತ್ತಾರೆ. ಅವರ ಪಕ್ಷದ ಅಭ್ಯರ್ಥಿ ಗೆದ್ದಿರೋದು, ಅವರ ಅಭ್ಯರ್ಥಿ ಗೆಲ್ಲಲ್ಲಿ ಅಂತ ಓಟು ಹಾಕಿಲ್ಲ. ಬಿಜೆಪಿ ಸೋಲಬೇಕು ಅಂತ ಬೇರೆ ಯಾರೋ ಮನಸ್ಸು ಮಾಡಿ ಓಟು ಹಾಕಿದ್ದರಲ್ಲಿ ಗೆದ್ದಿರುವುದು. ನನಗೆ ಬಂದಿರುವ ಮತಗಳು ಪ್ರೀತಂಗೌಡ ಗೆಲ್ಲಸಬೇಕು ಅಂತ ಬಂದಿರುವ ಮತಗಳು ಎಂದರು.
ನಾನು ಉತ್ಸಾಹದಲ್ಲಿ ಮಾತನಾಡಲ್ಲ, ನನ್ನ ಕೆಲಸ ಮಾತನಾಡುತ್ತೆ, ಜನ ನನಗೆ ಆಶೀರ್ವಾದ ಮಾಡಿದ್ದಾರೆ. ಅವರು ಮೂರ್ನಾಲ್ಕು ಸಾರಿ ಬಂದು ಸೋಲಿಸಿ ಅಂತ ಹೇಳಿದಾಗಲೂ ಜನರು 78 ಸಾವಿರ ಓಟು ಹಾಕಿದ್ದಾರೆ.
84 ಸಾವಿರ ಈಗ ಎಷ್ಟು ಸಾವಿರ ಆಗಿದೆ ಅನ್ನೋದನ್ನ ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು. 2023ರಲ್ಲಿ ಪ್ರೀತಂ ಸೋಲಿಸಿ ಅಂದಿದ್ದರು, ಈಗ ತಮ್ಮ ಅನ್ನುತ್ತಿದ್ದಾರೆ, 2028 ರಲ್ಲಿ ಏನು ಅಂತಾರೆ ಅನ್ನುವುದು ಗೊತ್ತಿಲ್ಲ ಎಂದು ಕುಟುಕಿದರು.
ಅವರು ತಮ್ಮ ಶಕ್ತಿ ಏನಿದೆಯೋ ಅದನ್ನು ನೋಡಲಿ, ನಮ್ಮ ನಾಯಕರು ಏನು ಹೇಳ್ತಾರೆ, ಮಾರ್ಗದರ್ಶನ ಕೊಡ್ತಾರೆ ಆ ಕೆಲಸ ಮಾಡ್ತಿನಿ. ಬಿರುಸಿನಿಂದ ಮಾತನಾಡ್ತಾರೆ, ಯುವಕ ಅಂತಾರೆ, ಯುವಕ ಆಗಿರುವುದಕ್ಕೇ 78 ಸಾವಿರ ಮತ ಹಾಕಿರೋದು ಎಂದರು.
ಎಂಪಿ ಚುನಾವಣೆ ಆದ್ಮೇಲೆ ಬೂತ್ ತೆಗೆದು ನೋಡಿದ್ರೆ ಯಾರ‌್ಯಾರ ಶಕ್ತಿ ಏನು ಅನ್ನೋದು ಈಗಿರುವ ಶಾಸಕರಿಗೂ ಗೊತ್ತಾಗುತ್ತೆ. ನನ್ನ ವಿರುದ್ಧ ಬಂದು ಚುನಾವಣೆ ಮಾಡಿದವರಿಗೂ ನನ್ನ ನೈಜ ಶಕ್ತಿ ಏನು ಅನ್ನೋದು ಗೊತ್ತಾಗುತ್ತೆ ಎಂದು ಹೇಳಿದರು.
ನಾನು ಬೇರೆಯವರ ತರಹ ಒಂದ್ಸಲ ಒಂದು, ಇನ್ನೊಂದು ಸಲ ಇನ್ನೊಂದು ಮಾತನಾಡಲ್ಲ. ನಾನು ಯುವಕನಾಗಿ ಹುಮ್ಮಸ್ಸಿನಿಂದ, ಬಿರುಸಿನಿಂದ ಮಾತನಾಡಿದ್ರು ಅದರಲ್ಲಿ ಬದ್ಧತೆ ಇರುತ್ತೆ. ಬದ್ದತೆ ಇದ್ದರೆ ಮಾತ್ರ ಮಾತನಾಡುತ್ತೇನೆ.
ನಮ್ಮ ಪಕ್ಷ ಗೆಲ್ಲಬೇಕು, ನಮ್ಮ ಪಕ್ಷ ಗಟ್ಟಿಯಾಗಬೇಕು ಅಷ್ಟೇ ಎಂದರು.