ಹಾಸನ: ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ ಭೀಮ ಕನ್ನಡ ಚಲನಚಿತ್ರ ಇಂದು ಅಮೆಜಾನ್ ಪ್ರೈಂ ಒಟಿಟಿಯಲ್ಲಿ ದಿಢೀರ್ ಬಿಡುಗಡೆಯಾಗಿದೆ.
ಸತತ ಸೋಲುಗಳಿಂದ ಜರ್ಝರಿತವಾಗಿದ್ದ ಕನ್ನಡ ಚಿತ್ರರಂಗಕ್ಕೆ ಗೆಲುವಿನ ಟಾನಿಕ್ ನೀಡಿದ್ದ ಭೀಮ ಚಿತ್ರ ದುನಿಯಾ ವಿಜಯ್ ನಿರ್ದೇಶನದ ಎರಡನೇ ಚಿತ್ರ.
ಈಗಲೂ ಥಿಯೇಟರ್ ಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿತವಾಗುತ್ತಿರುವ ಭೀಮದ ದಿಢೀರ್ ಒಟಿಟಿ ಎಂಟ್ರಿ ಅಚ್ಚರಿದಾಯಕವಾಗಿದೆ.