ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸಕ್ಕೂ ಬಾರದ ಭವಾನಿ ರೇವಣ್ಣ; ಎಸ್ಐಟಿ ವಿಚಾರಣೆಗೆ ಹಾಜರಾಗುವುದು ಡೌಟ್?

ಯಾವುದೇ ಕ್ಷಣದಲ್ಲಿ ಭವಾನಿ ವಿಚಾರಣೆಗಾಗಿ ಆಗಮಿಸಲಿರುವ ಎಸ್ಐಟಿ ಅಧಿಕಾರಿಗಳು

ಹಾಸನ: ಅತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಭವಾನಿರೇವಣ್ಣ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು ಇಂದು ಎಸ್ಐಟಿ ವಿಚಾರಣೆಗೆ ಎದುರಿಸಬೇಕಿರುವ ಅವರು ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸಕ್ಕೆ ಆಗಮಿಸದಿರುವುದು ಕುತೂಹಲ ಮೂಡಿಸಿದೆ.

ಈಗಾಗಲೇ ಭವಾನಿ ಅವರಿಗೆ ನೋಟಿಸ್‌ನಲ್ಲಿ ತಿಳಿಸಿರುವಂತೆ ಎಸ್‌ಐಟಿ, ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯೊಳಗೆ ಮಹಿಳಾ ಅಧಿಕಾರಿಗಳ ಜತೆ ಆಗಮಿಸಲಿದೆ. ಈ ಮೊದಲಿನ ಎಸ್‌ಐಟಿ ನೋಟೀಸ್‌ಗೂ ಉತ್ತರಿಸದ ಭವಾನಿರೇವಣ್ಣ ಇದುವರೆಗೂ ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸಕ್ಕೂ ಬಂದಿಲ್ಲ.

ಯಾವುದೇ ಕ್ಷಣದಲ್ಲಾದರೂ ಚೆನ್ನಾಂಬಿಕಾ ನಿವಾಸಕ್ಕೆ ಆಗಮಿಸಲಿರುವ ಎಸ್‌ಐಟಿ ತಂಡ ಬೆಂಗಳೂರಿನಿಂದ ಹೊರಟಿದ್ದು, ಭವಾನಿ ಅವರು ಎಸ್‌ಐಟಿ ಮುಂದೆ ಹಾಜರಾಗುವುದು ಅನುಮಾನ ಎನ್ನಲಾಗುತ್ತಿದೆ.