ವಿಡಿಯೋ: ಬಾಗಿಲಿಗೆ ನಮಿಸಿ ಮನೆಗೆ ಮರಳಿದ ಭವಾನಿ ರೇವಣ್ಣ- ಹೂಮಳೆ, ಆರತಿ, ಜೈಕಾರದ ಸ್ವಾಗತ

ಹಾಸನ, ಏಪ್ರಿಲ್ 07: ಸಂತ್ರಸ್ತೆ ಕಿಡ್ನಾಪ್ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಹಾಸನ ಜಿಲ್ಲೆಗೆ ಪ್ರವೇಶಿಸದಂತೆ ತಡೆಯಾಜ್ಞೆ ಹೊಂದಿದ್ದ ಭವಾನಿ ರೇವಣ್ಣ ಅವರು, ಹತ್ತು ತಿಂಗಳ ನಂತರ ಇಂದು ಜಿಲ್ಲೆಗೆ ಆಗಮಿಸಿದ್ದಾರೆ.

ಕಳೆದ ಶುಕ್ರವಾರ ಹೈಕೋರ್ಟ್ ಷರತ್ತು ಸಡಿಲಿಸಿದ ಹಿನ್ನೆಲೆಯಲ್ಲಿ ಅವರು ಹೊಳೆನರಸೀಪುರದ ನಿವಾಸಕ್ಕೆ ಮರಳಿದರು. ಪ್ರಕರಣದ ತನಿಖೆಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿಯೇ ನೆಲೆಸಿದ್ದ ಭವಾನಿ ರೇವಣ್ಣ ಅವರಿಗೆ, ಹೈಕೋರ್ಟ್‌ನ ಇತ್ತೀಚಿನ ಆದೇಶದಿಂದ ಜಿಲ್ಲೆಗೆ ಮರಳಲು ಅವಕಾಶ ದೊರೆತಿದೆ.

ಕೆಳಗಿನ ಲಿಂಕ್ ಒತ್ತಿ ವಿಡಿಯೋ ವೀಕ್ಷಿಸಿ

ಇಂದು ಹಾಸನ ಜಿಲ್ಲೆಯ ಗಡಿಭಾಗವಾದ ಹಿರೀಸಾವೆ, ಚನ್ನರಾಯಪಟ್ಟಣ ಹಾಗೂ ಹೊಳೆನರಸೀಪುರಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಜಿಲ್ಲೆಗೆ ಪ್ರವೇಶಿಸಿದ ಸಂದರ್ಭದಲ್ಲಿ ಭವಾನಿ ರೇವಣ್ಣ ಅವರ ಜೈಕಾರ ಕೂಗಿದ ಕಾರ್ಯಕರ್ತರು, ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆಯಲ್ಲಿ ತೊಡಗಿದರು.

ಹೊಳೆನರಸೀಪುರದಲ್ಲಿ ನಡೆದ ಸ್ವಾಗತ ಸಮಾರಂಭದಲ್ಲಿ ಜೆಡಿಎಸ್‌ನ ಹಲವು ಮುಖಂಡರು ಮತ್ತು ಬೆಂಬಲಿಗರು ಉಪಸ್ಥಿತರಿದ್ದರು. ಭವಾನಿ ರೇವಣ್ಣ ಅವರ ಮೇಲೆ ಹೂಮಳೆ ಸುರಿಸಿ ಅವರಿಗೆ ಆರತಿ ಎತ್ತಿ ಅಭಿಮಾನಿಗಳು ಹೊಳೆನರಸೀಪುರದ ನಿವಾಸಕ್ಕೆ ಸ್ವಾಗತಿಸಿದರು.

ಸ್ವಾಗತ ಸ್ವೀಕರಿಸಿದ ನಂತರ ಭವಾನಿ ರೇವಣ್ಣ ಅವರು ಮನೆಯ ತಾಯಿ ಬಾಗಿಲಿಗೆ ನಮಸ್ಕರಿಸಿ ಒಳ ಪ್ರವೇಶಿಸಿದರು.

ಜಾಹೀರಾತು