ಹಾಸನ: ನಿರೀಕ್ಷೆಯಂತೆ ಬಂಧನ ಭೀತಿಯಲ್ಲಿರುವ ಭವಾನಿ ರೇವಣ್ಣ ಇಂದೂ ಎಸ್ಐಟಿ ತನಿಖೆಗೆ ಹಾಜರಾಗಲಿಲ್ಲ. ದಿನವಿಡೀ ಅವರ ಮನೆ ಎದುರು ನಿಂತು ಕಾದ ಎಸ್ಐಟಿ ತಂಡ ಬರಿಗೈಲಿ ಮರಳಿತು.
ಬೆಳಿಗ್ಗೆ 11 ಗಂಟೆಗೆ ಮನೆ ಬಳಿ ಬಂದಿದ್ದ ಎಸ್ಐಟಿ ಟೀಂ ಸತತ ಏಳು ಗಂಟೆ ಕಾಲ ಅವರಿಗಾಗಿ ಕಾದು ಕುಳಿತಿತ್ತು.
ಸಂಜೆ ಐದು ಗಂಟೆವರೆಗೂ ಕಾದರೂ ಭವಾನಿ ಬಾರದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗದ ಬಗ್ಗೆ ವರದಿ ತಯಾರಿಸಿಕೊಂಡ ಎಸ್ಐಟಿ ಅಧಿಕಾರಿಗಳು ಬೆಂಗಳೂರಿಗೆ ಮರಳಿದರು.