ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಸಿ.ಶಶಿಧರ್ ಆಯ್ಕೆ

ಕಾರ್ಯದರ್ಶಿಗಳಾಗಿ ಸಿ.ಬಿ.ಸಂತೋಷ್, ಪಿ.ಎ.ಶ್ರೀನಿವಾಸ್ ಆಯ್ಕೆ| ಅಭಿನಂದಿಸಿದ ಪತ್ರಕರ್ತರು

ಹಾಸನ: ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಬಿ.ಸಿ.ಶಶಿಧರ್ ಆಯ್ಕೆಯಾಗಿದ್ದಾರೆ.

ಬಿ.ಸಿ.ಶಶಿಧರ್ ಅವರನ್ನು ಸಂಘದ ಅಧ್ಯಕ್ಷ ಕೆ.ಎಚ್.ವೇಣುಕುಮಾರ್, ರಾಜ್ಯ ಸಮಿತಿ ಸದಸ್ಯ ಎಚ್.ಬಿ.ಮದನಗೌಡ, ಖಜಾಂಚಿ ಕುಮಾರ್, ಮಾಜಿ ಅಧ್ಯಕ್ಷ ಎಸ್.ಆರ್.ಪ್ರಸನ್ನಕುಮಾರ್, ಮಾಜಿ ಪ್ರಧಾನ ಕಾರ್ಯದರ್ಶಿ ಕೆ.ಜಿ.ಸುರೇಶ್, ಮಾಜಿ ಉಪಾಧ್ಯಕ್ಷ ಪ್ರಕಾಶ್ ಸೇರಿದಂತೆ ಎಲ್ಲ ಪತ್ರಕರ್ತರು ಅಭಿನಂದಿಸಿದರು.

ಸಂಘದ ಕಾರ್ಯದರ್ಶಿಗಳಾಗಿ ಸಿ.ಬಿ.ಸಂತೋಷ್ ಹಾಗೂ ಪಿ.ಎ.ಶ್ರೀನಿವಾಸ್ ಆಯ್ಕೆಯಾಗಿದ್ದು ಅವರನ್ನು ಅಭಿನಂದಿಸಲಾಯಿತು.